ಸುದ್ದಿ ಸಂಕ್ಷಿಪ್ತ

ಜ.10ರಂದು ‘ಭವಿಷ್ಯ ನಿಧಿ ನಿಮ್ಮ ಹತ್ತಿರ’ ಕಾರ್ಯಾಗಾರ

ಹಾಸನ (ಡಿ.27): 2018 ರ ಜನವರಿ 10 ರಂದು ಭವಿಷ್ಯ ನಿಧಿ ನಿಮ್ಮ ಹತ್ತಿರ ಕಾರ್ಯಾಗಾರವನ್ನು ಚಿಕ್ಕಮಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಭವಿಷ್ಯನಿಧಿ ಅದಾಲತ್‍ಗೆ ಬದಲಾದ ಕಾರ್ಯಕ್ರಮವಾಗಿದೆ.

ಭವಿಷ್ಯನಿಧಿ ಉದ್ಯೋಗದಾತರು, ಸದಸ್ಯರು ಮತ್ತು ಪಿಂಚಣಿದಾರರು ತಮ್ಮ ದೂರುಗಳೇನಾದರೂ ಇದ್ದಲ್ಲಿ ತಮ್ಮ ಅರ್ಜಿಯನ್ನು ಜನವರಿ 5 ರೊಳಗೆ ಅಂಚೆಯ ಮೂಲಕ ನೋಂದಾಯಿಸಲು ಅಥವಾ ಖುದ್ದಾಗಿ ಜ.10ರಂದು ನೋಂದಾಯಿಸಬಹುದು. ಎಲ್ಲಾ ದೂರುಗಳನ್ನು ಅದೇ ದಿನ ಇತ್ಯರ್ಥ ಪಡಿಸಲು ಕ್ರಮವಹಿಸಲಾಗುತ್ತದೆ. ನಿಗದಿತ ದಿನಾಂಕದಂದು ದಾಖಲಾತಿಗಳೊಂದಿಗೆ ಭವಿಷ್ಯನಿಧಿ ಸದಸ್ಯರು, ಪಿಂಚಣಿದಾರರು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆ, ಉದ್ಯೋಗದಾತರು ಮಧ್ಯಾಹ್ನ 3 ರಿಂದ 4 ಗಂಟೆಯವೆರೆಗೆ, ವಿನಾಯಿತಿ ಕಂಪನಿಗಳಿಗೆ ಸಂಜೆ 4 ರಿಂದ 5 ಗಂಟೆಯವರೆಗೆ ಖುದ್ದಾಗಿ ಭಾಗವಹಿಸಬಹುದಾಗಿದೆ.

ಸದಸ್ಯರು ಹಾಗೂ ಉದ್ಯೋಗದಾತರು ವೆಬ್‍ಸೈಟ್‍ನಲ್ಲಿ ತಮ್ಮ ದೂರುಗಳನ್ನು ನೋಂದಾಯಿಸಬಹುದು. ನೋಂದಾಯಿಸಿದ ದೂರುಗಳನ್ನು 15 ದಿನಗಳೊಳಗೆ ಇತ್ಯರ್ಥ ಮಾಡಲಾಗುವುದು ಎಂದು ಚಿಕ್ಕಮಗಳೂರು ಸಹಾಯಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08262-234106 ಅನ್ನು ಸಂಪರ್ಕಿಸಬಹುದು.

(ಎನ್‍ಬಿ)

Leave a Reply

comments

Related Articles

error: