ಮೈಸೂರು

ಮೈಸೂರು ಅಮಿಟಿ ರೌಂಡ್ ಟೇಬಲ್‍ನಿಂದ ಯಶಸ್ವಿ ಸಮಾಜಮುಖಿ ಕಾರ್ಯಗಳು

  • ಶ್ರೀ ಆರ್ಥೋ ಕೇಂದ್ರದ ಬಡ ರೋಗಿಗಳಿಗೆ ಕೃತಕ ಕಾಲುಗಳ ವಿತರಣೆ
  • ಮದರ್ ತೆರೇಸಾ ನಿರ್ಗತಿಕರ ಆಶ್ರಮಕ್ಕೆ ನೈರ್ಮಲ್ಯ ಸಾಮಗ್ರಿಗಳ ವಿತರಣೆ
  • ಸರ್ಕಾರಿ ಅಂಧರ ಶಾಲೆಯ ಮಕ್ಕಳಿಗೆ ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್ ಪ್ರವಾಸ

ರೌಂಡ್ ಟೇಬಲ್ ಇಂಡಿಯಾದ ಮೈಸೂರು ಚಾಪ್ಟರ್‌ಗಳಲ್ಲಿ ಒಂದಾದ ಮೈಸೂರು ಅಮಿಟಿ ರೌಂಡ್ ಟೇಬಲ್ 156, (MART 156) ವಾರದ ಚಟುವಟಿಕೆಗಳ ಭಾಗವಾಗಿ ರೌಂಡ್ ಟೇಬಲ್ ಇಂಡಿಯಾದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಲವು ಕಾರ್ಯಕ್ರಮಗಳ ಸರಣಿ ಯಶಸ್ವಿ ಮುಕ್ತಾಯ ಕಂಡಿತು.

20-saplings-planted-at-koorgaali-govt-school-mr-kiran-ranga-chairman-mr-anirudh-ranga-vice-chairman-and-mr-adith-raju-secretary-seenನವೆಂಬರ್ 9ರಂದು ಮಾರ್ಟ್ 156 ವತಿಯಿಂದ 20 ರಿಂದ 60 ವರ್ಷ ವಯಸ್ಸಿನ ರೋಗಿಗಳಿಗೆ 12 ಕೃತಕ ಕಾಲುಗಳನ್ನು ದಾನ ಮಾಡಲಾಯಿತು. ಮೈಸೂರು ಮತ್ತು ಅದರ ಸುತ್ತಮುತ್ತ ವಾಸಿಸುವ ರೋಗಿಗಳು ಶ್ರೀ ಆರ್ಥೋ ಕೇಂದ್ರದಲ್ಲಿ ಈ ಸೇವೆಯನ್ನು ಪಡೆದುಕೊಂಡರು. ಇದರ ಜೊತೆಗೆ ಮಾರ್ಟ್ 156 ವತಿಯಿಂದ ಕೂರ್ಗಳ್ಳಿ ಸರ್ಕಾರಿ ಶಾಲೆಯಲ್ಲಿ 20 ಸಸಿಗಳನ್ನು ನೆಡಲಾಯಿತು ಮತ್ತು ಈ ಶಾಲೆಯಲ್ಲಿ ಕಸದ ತೊಟ್ಟಿಗಳನ್ನು ಅನುಸ್ಥಾಪಿಸಲಾಯಿತು. ಈ ಶಾಲೆಯು ಹಸಿರಿನ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದ ಕಾರಣ ಈ ಶಾಲೆಯನ್ನೇ ಆಯ್ಕೆ ಮಾಡಿಕೊಳ್ಳಲಾಯಿತು.

ನವೆಂಬರ್ 10ರಂದು ಮಾರ್ಟ್156 ವತಿಯಿಂದ ಮೈಸೂರಿನ ಮದರ್ ತೆರೇಸಾ ನಿರ್ಗತಿಕರ ಆಶ್ರಮಕ್ಕೆ ನೈರ್ಮಲ್ಯ ಸಾಮಗ್ರಿಗಳನ್ನು ಒದಗಿಸಲಾಯಿತು. ಅದೇ ದಿನ ಬಂಬೂ ಬಜಾರ್ ಸರ್ಕಾರಿ ಅಂಧರ ಶಾಲೆಯ ವಿದ್ಯಾರ್ಥಿಗಳಿಗೆ 6 ಕ್ರೀಡಾ ಕಿಟ್‌ಗಳನ್ನು ದಾನ ಮಾಡಲಾಯಿತು. ಈ ವಿದ್ಯಾರ್ಥಿಗಳು ದೆಹಲಿಯಲ್ಲಿ ನಡೆಯಲಿರುವ ಅಂಧರ ರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.

ಮಕ್ಕಳ ದಿನದ ಅಂಗವಾಗಿ ನವೆಂಬರ್ 11ರಂದು ಮಾರ್ಟ್156 ವತಿಯಿಂದ ಸರ್ಕಾರಿ ಅಂಧರ ಶಾಲೆಯ 48 ಮಕ್ಕಳಿಗೆ ಜಿ.ಆರ್.ಎಸ್. ಫ್ಯಾಂಟಸಿ ಪಾರ್ಕ್‌ಗೆ ಒಂದು ದಿನದ ಪ್ರವಾಸವನ್ನು ಆಯೋಜಿಸಲಾಗಿತ್ತು. ಈ ಪ್ರವಾಸ ಮಕ್ಕಳಿಗೆ ಒಂದು ರೀತಿಯ ಆನಂದವನ್ನು ನೀಡಿತಲ್ಲದೆ, ಕೆಲವು ಮಕ್ಕಳಿಗಂತೂ ವಾಟರ್ ಥೀಮ್ ಪಾರ್ಕ್ ಮೊದಲ ಅನುಭವವಾಗಿತ್ತು. ಮಕ್ಕಳು ಈ ದಿನವನ್ನು ಅತ್ಯಂತ ಸಂತೋಷದಿಂದ ಕಳೆದರು.

ಈ ಯೋಜನೆಗಳ ಬಗ್ಗೆ ಮಾತನಾಡಿದ ಮಾರ್ಟ್-156 ಅಧ್ಯಕ್ಷ ಕಿರಣ್ ರಂಗ ಅವರು, “ಸುತ್ತಮುತ್ತಲಿರುವ ಜನರ ಜೀವನ ಮಟ್ಟವನ್ನು ಸುಧಾರಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ನಾವು ಪ್ರತಿ ವರ್ಷ ಶಿಕ್ಷಣ ಆಧಾರಿತ ಮತ್ತು ಸಮುದಾಯ ಆಧಾರಿತ ಚಟುವಟಿಕೆಗಳನ್ನು ನಡೆಸುವ ಮೂಲಕ ಸಮಾಜಕ್ಕೆ ನಮ್ಮಿಂದಾದ ಸಹಾಯ ಮಾಡಲು ನಿರ್ಧರಿಸಿದ್ದೇವೆ. ಹಾಗೆಯೇ ಯಾವುದೇ ಸಂದರ್ಭಗಳಲ್ಲಿಯೂ ಸಾಮಾನ್ಯ ನೈರ್ಮಲ್ಯದ ವಿಷಯದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳಬಾರದು. ಇದು ಮಕ್ಕಳ ಆರೋಗ್ಯದ ಮೇಲೆ ಮಾತ್ರವಲ್ಲ, ಅಧ್ಯಯನದ ಮೇಲೂ ಪ್ರಭಾವ ಬೀರುತ್ತದೆ. ಹೀಗಾಗಿ ಸರ್ಕಾರಿ ಶಾಲೆಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತಹ ಒಂದು ಸಮಾಜಮುಖಿ ಅಭಿಯಾನವನ್ನು ಕೈಗೊಂಡ ಬಗ್ಗೆ ನಮಗೆ ಅತ್ಯಂತ ಸಂತೋಷವಿದೆ. ಮುಂದಿನ ದಿನಗಳಲ್ಲಿಯೂ ನಾವು ವಿದ್ಯಾರ್ಥಿಗಳಿಗೆ ಕಲಿಯಲು ಮತ್ತು ಬೆಳೆಯಲು ಒಂದು ಉತ್ತಮ ಪರಿಸರವನ್ನು ನಿರ್ಮಿಸಲು ಸಹಾಯ ಮಾಡುವ ಉದ್ದೇಶವನ್ನು ಒಳಗೊಂಡ ಇಂತಹ ಇನ್ನಷ್ಟು ಉಪಕ್ರಮಗಳನ್ನು ಬೆಂಬಲಿಸಲು ಬಯಸುತ್ತೇವೆ” ಎಂದರು.

“ಶಿಕ್ಷಣದ ಮೂಲಕ ಮಾತ್ರ ಸಂಪೂರ್ಣ ಸ್ವಾತಂತ್ರ್ಯಸಾಧ್ಯ” ಎಂದು ನಂಬಿರುವ ರೌಂಡ್ ಟೇಬಲ್ ಇಂಡಿಯಾ, ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳ ಕಡೆಗೆ ವ್ಯಾಪಕವಾದ ಕೊಡುಗೆ ನೀಡುತ್ತ ಬಂದಿದೆ. ಅನೇಕ ಶಾಲೆಗಳನ್ನು ಉತ್ತಮಗೊಳಿಸಲು ಕಾರಣೀಭೂತವಾಗಿದ್ದು, ತರಗತಿಗಳನ್ನು ನಿರ್ಮಿಸಿಕೊಟ್ಟಿದೆ. ಕೇವಲ ಮೈಸೂರಿನಲ್ಲಿಯೇ ರೌಂಡ್ ಟೇಬಲ್ ಇಂಡಿಯಾ, ೧೧ ಶಾಲೆಗಳನ್ನು ನಿರ್ಮಿಸಿ, ನವೀಕರಿಸಿ ಕೊಟ್ಟಿದೆ. ರೌಂಡ್ ಟೇಬಲ್ ಇಂಡಿಯಾ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲಾಗಿನ್ www.roundtableindia.org. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: E-mail: [email protected] or call Uma Bai | 7022548894.

Leave a Reply

comments

Related Articles

error: