ಮೈಸೂರು

ಮಹದಾಯಿ ನದಿನೀರು ವಿಚಾರ : ಕರ್ನಾಟಕ ಸೇನಾ ಪಡೆ, ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಬೆಂಬಲ

ಮೈಸೂರು,ಡಿ.27:- ಮಹದಾಯಿ ನದಿನೀರು ವಿಚಾರವಾಗಿ ಇಂದಿನ ಉತ್ತರ ಕರ್ನಾಟಕ ಬಂದ್ ಅನ್ನು ನಮ್ಮ ಕರ್ನಾಟಕ ಸೇನಾ ಪಡೆ ಬೆಂಬಲಿಸುತ್ತದೆ ಎಂದು ಕರ್ನಾಟಕಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ತಿಳಿಸಿದರು

ಮೈಸೂರಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು  ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ನಮಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ಯಡಿಯೂರಪ್ಪನವರು ನಮಗೆ ಬರೀ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಜನರಿಗೆ ಕುಡಿಯಲು ನೀರಿಲ್ಲದೆ ಸಾಯುತ್ತಿದ್ದಾರೆ. ಅನಾವಶ್ಯಕವಾಗಿ ಮಹದಾಯಿ ನೀರು ಸಮುದ್ರ ಸೇರುತ್ತಿದೆ.  ನಮ್ಮ ರಾಜ್ಯದ ನೆಲ, ಜಲದ ಪರ ನಿಲ್ಲದೆ ಪಕ್ಷ ರಾಜಕಾರಣ ಮಾಡುತ್ತಿರುವ 28 ಜನ ಸಂಸದರಿಗೆ ನಮ್ಮ ಧಿಕ್ಕಾರ. ನೆಲ ಜಲದ ಪರ ಹೋರಾಡುವ ಗುಣವನ್ನು ನಮ್ಮ ಸಂಸದರು ನಮ್ಮ ನೆರೆಯ ರಾಜ್ಯವಾದ ತಮಿಳುನಾಡಿನಿಂದ ಕಲಿಯಬೇಕು. ಕಳಸಾ ಬಂಡೂರಿ ಹೋರಾಟ, ಕಾವೇರಿ ಹೋರಾಟ, ಕೃಷ್ಣಾನದಿ ಹೋರಾಟ , ಬರೀ ಈ ಹೋರಾಟಗಳಲ್ಲೇ ನಮ್ಮ ಕನ್ನಡಿಗರ ಜೀವ ಹೋಗುತ್ತಿದೆ ಎಂದರು.

ಪ್ರತಿಭಟನೆಯಲ್ಲಿ   ಪ್ರಜೀಶ, ಶಾಂತಮೂರ್ತಿ, ಸಿ ಎಸ್ ನಂಜುಂಡಸ್ವಾಮಿ, ಮನುನಾಯಕ್ ಗುರುಮಲ್ಲಪ್ಪ, ತಿಪ್ಪಯ್ಯ, ಗುರುಶಂಕರ್, ನಾಜೀರ್, ಶಬೀರ್,  ಸುನಿಲ್, ಸ್ವಾಮಿ, ನಿತ್ಯಾನಂದ, ರಾಘವೇಂದ್ರ, ರಾಜೇಶ್  ಬಾಬು, ಫಣೀಶ್, ಮೂರ್ತಿ ಇದ್ದರು.

ಇದೇ ವೇಳೆ ಕೇಂದ್ರ ಸರ್ಕಾರ ಮಹದಾಯಿ ವಿಚಾರಕ್ಕೆ  ಮಧ್ಯಪ್ರವೇಶಿಸಬೇಕೆಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು. ನ್ಯಾಯಾಲಯದ ಎದುರು ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಉತ್ತರ ಕರ್ನಾಟಕ ಜನತೆಯ ಬದುಕು ನೀರಿಲ್ಲದೇ ದುಸ್ತರವಾಗಿದ್ದು, ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಹಲವು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ರಾಜಕೀಯ ಹಿತಾಸಕ್ತಿಗಾಗಿ ಮೌನತಾಳಿರುವುದು ಖಂಡನೀಯ ಎಂದರು. ಕೂಡಲೇ ಪ್ರಧಾನಮಂತ್ರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ದೇವಪ್ಪ ನಾಯಕ, ವಕೀಲ ಎಂ ರಾಮ, ಪ್ರಭಾಕರ, ಶಿವಪ್ರಕಾಶ್, ಶ್ರೀಧರ್, ನಾಗವಾಲ ವಿನೋದ್, ಟೆನ್ನಿಸ್ ಗೋಪಿ, ಎಳನೀರು ಕುಮಾರ್ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: