ಮೈಸೂರು

ನಗರ ಎಸ್ಸಿ ಘಟಕದ ಅಧ್ಯಕ್ಷರಾಗಿ ಆರ್.ಸುನಂದಕುಮಾರ್ ಅಧಿಕಾರ ಸ್ವೀಕಾರ

ಮೈಸೂರು,ಡಿ.27-ನಗರ ಎಸ್ ಸಿ ಘಟಕದ ಅಧ್ಯಕ್ಷರಾಗಿ ಮಾಜಿ ನಗರಪಾಲಿಕೆ ಸದಸ್ಯ ಆರ್.ಸುನಂದಕುಮಾರ್ ಬುಧವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಗಡೆ ಕಾಂಗ್ರೆಸ್ ಪಕ್ಷದ ಭಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಡಿಸಿಸಿ ಕಾರ್ಯದರ್ಶಿ ಮಲ್ಲಿಕಾರ್ಜುನ್, ಎಸ್ ಸಿ ರಾಜ್ಯಾಧ್ಯಕ್ಷ ಜಟ್ಟಪ್ಪ, ಮಾಜಿ ಮಹಾಪೌರ ಹಾಗೂ ನಗರಪಾಲಿಕೆ ಸದಸ್ಯ ಪುರುಷೋತ್ತಮ್, ಅಲ್ಪಸಂಖ್ಯಾತರ ಅಧ್ಯಕ್ಷ ಫೈರೋಜ್ ಖಾನ್, ನಗರಪಾಲಿಕೆ ಸದಸ್ಯ ಧ್ರುವರಾಜ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಪಿ.ರಾಜು, ಭಾಸ್ಕರ್, ಗಿರೀಶ್, ಪ್ರಭುಮೂರ್ತಿ, ಪ್ರಸಾದ್, ಪಾಟೀಲ್, ಯಡತೊರೆ ನಿಂಗರಾಜು, ಶೌಕತ್ ಅಲಿ ಖಾನ್ ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: