ಮೈಸೂರು

ಡಿ.30. ಅಂಧ ವಿದ್ಯಾರ್ಥಿಗಳಿಗೆ ಪಿಯುಸಿ ಪಠ್ಯಕ್ರಮದ ಧ್ವನಿ ಪುಸ್ತಕ ಬಿಡುಗಡೆ

ಮೈಸೂರು, ಡಿ. 27 : ಅಂಧ ವಿದ್ಯಾರ್ಥಿಗಳಿಗಾಗಿ ಪಠ್ಯ ಪುಸ್ತಕ ಆಧಾರಿತ ಧ್ವನಿ ಪುಸ್ತಕ ಬಿಡುಗಡೆ, ಕಾರ್ಯಾಗಾರ, ಹಾಗೂ ಕಾನೂನು ಮಾಹಿತಿ ಸಂವಾದವನ್ನು ಆಯೋಜಿಸಲಾಗಿದೆ ಎಂದು ಶುಬೋಧಯ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ಬಾಲಾಜಿ ತಿಳಿಸಿದರು.

ಬುಧವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ. 30ರಂದು ಬೆಳಗ್ಗೆ 9 ಗಂಟೆಯಿಂದ ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಕಾರ್ಯಾಗಾರ, ಸಂವಾದ ಸೇರಿದಂತೆ ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ ಅಂಧ ವಿದ್ಯಾರ್ಥಿಗಳಿಗಾಗಿ ಎನ್ಸಿಆರ್ಟಿ ಪಠ್ಯಕ್ರಮ ಆಧಾರಿತ ಧ್ವನಿ ಪುಸ್ತಕವನ್ನು ಬಿಡುಗಡೆಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಕಳೆದ ಮೂರು ವರ್ಷಗಳಿಂದ ಎಸ್ಎಸ್ಎಲ್ಸಿ ಗೆ ಸಂಬಂಧಿಸಿದಂತೆ ಪಠ್ಯದ ಧ್ವನಿ ಪುಸ್ತಕ ಬಿಡುಗಡೆಗೊಳಿಸಲಾಗಿದೆ, ಅದರಂತೆ ಇದೇ ಪ್ರಥಮ ಬಾರಿಗೆ ಪಿಯುಸಿ ವಿದ್ಯಾರ್ಥಿಗಳಿಗಾಗಿ ಇತಿಹಾಸ, ಅರ್ಥಶಾಸ್ತ್ರ, ಭೌಗೋಳಿಕ, ಕನ್ನಡ, ಇಂಗ್ಲಿಷ್ ಧ್ವನಿ ಮುದ್ರಣ ಬಿಡುಗಡೆಗೊಳಿಸಲಾಗುವುದು, ಧ್ವನಿ ಮುದ್ರಣವು ಆಕಾಶವಾಣಿ ಕಾರ್ಯಕ್ರಮದಂತೆ ಪ್ರಸ್ತುತಪಡಿಸಿದ್ದು ಇಂಪಾದ ಹಿನ್ನಲೆ ಸಂಗೀತವನ್ನೊಳಗೊಂಡಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಶುಬೋಧಯ ಟ್ರಸ್ಟಿನ ವೆಂಕಟೇಶ್, ವಿಜಯ್, ನಿವೃತ್ತ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಬಲರಾಮ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: