
ಮೈಸೂರು
ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಸಂಸ್ಥೆಗೆ ಮೊದಲ ದಿನವೇ 300 ಶಾಯಿ ಬಾಟಲಿಗೆ ಬೇಡಿಕೆ
2 ಲಕ್ಷದ 96 ಸಾವಿರದ 300 ಶಾಯಿ(5 ಮಿಲೀ) ಬಾಟಲಿಗಳನ್ನು ಪೂರೈಕೆ ಮಾಡುವಂತೆ ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಸಂಸ್ಥೆಗೆ ಕೇಂದ್ರ ಸರಕಾರ ಸೂಚಿಸಿದೆ.
500 ಮತ್ತು 1000 ರು. ನೋಟುಗಳು ವಿನಿಮಯ ಮಾಡಿಕೊಳ್ಳುವ ಸಮಯದಲ್ಲಿ ಕಾಳಧನದ ಹಾವಳಿ ತಡೆಯಲು ಗ್ರಾಹಕರ ಬೆರಳಿಗೆ ಶಾಯಿ ಹಾಕುವ ವ್ಯವಸ್ಥೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಶಾಯಿ ಪೂರೈಕೆಗೆ ಬೇಡಿಕೆ ಇಟ್ಟಿದೆ.
ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಸಂಸ್ಥೆಯ ಅಧ್ಯಕ್ಷ ಎಚ್.ಎ. ವೆಂಕಟೇಶ್ ಸಂಸ್ಥೆಯಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಇಂಕ್ ಪೂರೈಸುವಂತೆ ಮೈಲ್ಯಾಕ್ಸ್ಗೆ ನ.15ರಂದು ಕೇಂದ್ರ ಸರಕಾರದ ಆರ್ಥಿಕ ಸಚಿವಾಲಯ ತಿಳಿಸಿದ್ದು, ಬುಧವಾರ ಬೆಳಗ್ಗೆಯಿಂದಲೇ ಶಾಯಿ ಉತ್ಪದನಾ ಪ್ರಕ್ರಿಯೆ ಆರಂಭಿಸಲಾಗಿದೆ. ಸದ್ಯ 5 ಮಿಲೀ ಪ್ರಮಾಣದ 2 ಲಕ್ಷದ 96 ಸಾವಿರ 300 ಶಾಯಿ ಬಾಟಲಿಗಳನ್ನು ಪೂರೈಕ್ ಮಾಡಲು ತಿಳಿಸಿದ್ದು, ಇನ್ನು ಎಂಟು-ಹತ್ತು ದಿನಗಳಲ್ಲಿ ಸದರಿ ಪ್ರಮಾಣದ ಬೇಡಿಕೆಯನ್ನು ಪೂರ್ಣವಾಗಿ ಪೂರೈಸಲಾಗುವುದು ಎಂದು ತಿಳಿಸಿದರು.