
ಮೈಸೂರು
ಪರಿಶಿಷ್ಟ ಜಾತಿಗಳ ಐಕ್ಯತಾ ಸಮಾವೇಶಕ್ಕೆ ಗೋರ್ ಬಂಜಾರ ಸಮಾಜದ ಬೆಂಬಲ
ಮೈಸೂರು, ಡಿ. 27 : ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಡಿ.29 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪರಿಶಿಷ್ಟ ಜಾತಿಗಳ ಐಕ್ಯತಾ ಸಮಾವೇಶಕ್ಕೆ ಗೋರ್ ಬಂಜಾರ ಸಮಾಜ ಬಾಂಧವರು ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಗೋರ್ ಸೇನಾ, ಕರ್ನಾಟಕ ರಾಜ್ಯ ಮೈಸೂರು ಜಿಲ್ಲಾ ಘಟಕದ ಸಂಯೋಜಕ ಚಂದ್ರಪ್ರಕಾಶ್ ನಾಯಕ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಂಗಳೂರಿನ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೂ ಪ್ರತಿಭಟನೆಗೆ ಮೆರವಣಿಗೆ ಮೂಲಕ ತೆರಳಲಿ ಸರ್ಕಾರ ಗಮನ ಸೆಳೆಯಲಿದ್ದು, ಸಮಾವೇಶಕ್ಕೆ ನಗರದಿಂದ 1500ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.
ಸಮಾವೇಶದಲ್ಲಿ ಲಂಬಾಣಿ, ಭೋವಿ, ಕೊರಚ, ಕೊರಮ, ಬುಡ್ಗ ಜಂಗಮ, ಸಿಳ್ಳೇಕ್ಯಾತ, ವಡ್ಡರ, ಚೆನ್ನದಾಸರ, ಗಂಟಿ ಚೋರರು, ಸುಡುಗಾಡು ಸಿದ್ದರು ಹಾಗೂ ಇನ್ನುಳಿದ 99 ಪರಿಶಿಷ್ಟ ಜಾತಿಯವರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಲ ಮೇಲ್ಜಾತಿಯನ್ನು ಪರಿಶಿಷ್ಟಕ್ಕೆ ಸೇರಿಸಿರುವುದರಿಂದ ಕೆಳ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ, ಆದ್ದರಿಂದ ವರದಿಯನ್ನು ಸಾರಸಗಟಾಗಿ ತಿರಸ್ಕರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಯೋಜಕರಾದ ಲಕನ್ ನಾಯಕ್, ಮಲ್ಲೇಶ್ ನಾಯಕ್, ರಾಜೇಶ್ ನಾಯಕ್, ರಾಮುನಾಯಕ್, ವೆಂಕಟೇಶ್ ನಾಯಕ್ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)