ಮೈಸೂರು

ಆಟದ ಉಪಕರಣ ಉದ್ಘಾಟಿಸಿದ ಎನ್.ಧ್ರುವರಾಜ್

ಮೈಸೂರು,ಡಿ.27-ತಿಲಕನಗರದಲ್ಲಿರುವ ಸರ್ಕಾರಿ ಮೂಗರು ಹಾಗೂ ಕಿವುಡು ಮಕ್ಕಳ ಶಾಲೆಯ ಆವರಣದಲ್ಲಿ ವಿಶೇಷಚೇತನ ಮಕ್ಕಳು ಆಟವಾಡಲು ಅನುಕೂಲವಾಗುವಂತೆ 50 ಸಾವಿರ ವೆಚ್ಚದಲ್ಲಿ ನೂತನವಾಗಿ ಹಾಕಲಾಗಿರುವ ನಾಲ್ಕು ಉಯ್ಯಾಲೆ, ಒಂದು ಸೀಸಾ, ಜಾರುಬಂಡಿಯನ್ನು ಕಾಂಗ್ರೆಸ್ ಮುಖಂಡ ಹಾಗೂ ನಗರಪಾಲಿಕೆ ಸದಸ್ಯ ಎನ್.ಧ್ರುವರಾಜ್ ಉದ್ಘಾಟಿಸಿದರು.

ನಂತರ ಬೆಂಗಳೂರಿನಲ್ಲಿ ನಡೆಯುವ 21 ರಿಂದ 24ರ ಐಡಿಯಲ್ ಟಿ10 ಕ್ರಿಕೆಟ್ ಪಂದ್ಯಾವಳಿಗೆ ಮೈಸೂರು ಜಿಲ್ಲೆಯಿಂದ ಅಂಧರ ಶಾಲೆಯ ಮಕ್ಕಳು ಆಯ್ಕೆಯಾಗಿದ್ದು, ಅದಕ್ಕೆ ಟ್ರ್ಯಾಕ್ ಸೂಟ್ ಅನ್ನು ಅಮೆಥಿ ರೌಂಡ್ ಟೇಬಲ್ ವತಿಯಿಂದ 15 ಮಂದಿ ಅಂಧ ಮಕ್ಕಳಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಮೆಥಿ ರೌಂಡ್ ಟೇಬಲ್ ಅಧ್ಯಕ್ಷ ಕಾವೇರಪ್ಪ, ಮೋನಿನ್ ಸೇಟ್, ಮಹಾವೀರ್ ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

 

Leave a Reply

comments

Related Articles

error: