
ಮೈಸೂರು
ಉತ್ತರಕರ್ನಾಟಕ ಬಂದ್ ಹಿನ್ನಲೆ ಸರಣಿ ಟ್ವೀಟ್ಗಳ ಮೂಲಕ ಸರ್ಕಾರದ ಮೇಲೆ ಸಂಸದ ಪ್ರತಾಪ್ಸಿಂಹ ವಾಗ್ದಾಳಿ
ಮೈಸೂರು,ಡಿ.27:- ಮಹಾದಾಯಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಉತ್ತರಕರ್ನಾಟಕ ಬಂದ್ ಹಿನ್ನಲೆಯಲ್ಲಿ ಸರಣಿ ಟ್ವೀಟ್ಗಳ ಮೂಲಕ ಸರ್ಕಾರದ ಮೇಲೆ ಸಂಸದ ಪ್ರತಾಪ್ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಒಂದರ ಹಿಂದೆ ಒಂದರಂತೆ ಟ್ವೀಟ್ಗಳ ಸುರಿಮಳೆ ಸುರಿಸಿದ್ದು, ಎಲ್ಲ ಟ್ವೀಟ್ನಲ್ಲೂ ಕಾಂಗ್ರೆಸ್ ನಾಯಕರ ಹಳೆ ಹೇಳಿಕೆಗಳಿಗೆ ಸಂಬಂಧಿಸಿದ ದಾಖಲೆಗಳ ಉಲ್ಲೇಖವಿದೆ. ಸಿಎಂ ಸಿದ್ದರಾಮಯ್ಯ. ಸಚಿವ ಎಂ.ಬಿ.ಪಾಟೀಲ್. ವೀರಪ್ಪಮೋಯ್ಲಿ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು ಉತ್ತರ ಕರ್ನಾಟಕ ಬಂದ್ ಯಾರ ವಿರುದ್ಧ. ಕರ್ನಾಟಕಕ್ಕೆ ನೀರು ಬಿಡುವುದಿಲ್ಲ ಎಂಬ ಸೋನಿಯಾ ವಿರುದ್ದವೋ. ಗೋವಾ ಕಾಂಗ್ರೆಸ್ ಮನವೊಲಿಸದ ಸಿದ್ದರಾಮಯ್ಯ ವಿರುದ್ದವೋ.ಈ ಬಂದ್ ಯಾರ ವಿರುದ್ದ ಎಂದು ಪ್ರಶ್ನಿಸಿದ್ದಾರೆ. ಎತ್ತಿನಹೊಳೆ ಯೋಜನೆ ಬಗ್ಗೆ ಕೋಲಾರ ಚಿಕ್ಕಬಳ್ಳಾಪುರದ ಜನ ದಂಗೆ ಎದ್ದಿಲ್ಲ. ಆದರೆ ಒಳಗೇ ಧಗೆ ಇದ್ದು ಅದು ಚುನಾವಣೆಯಲ್ಲಿ ಗೊತ್ತಾಗಲಿದೆ. ಎಂ.ಬಿ.ಪಾಟೀಲರೇ ನೀವು ಧರಣಿ ಕೂರಬೇಕಾದ ಸ್ಥಳ ಗೋವಾ ಕಾಂಗ್ರೆಸ್ ಅಧ್ಯಕ್ಷರ ಮನೆ ಮುಂದೆ. ಸಿದ್ದರಾಮಯ್ಯನವರೇ ನೀವು ಗೋವಾ ಕಾಂಗ್ರೆಸ್ ನಾಯಕರ ಮನ ವೊಲಿಸುವ ಮಾತುಕೊಟ್ಟಿದ್ದರಲ್ಲ ಏನಾಯ್ತು. ಕರ್ನಾಟಕದಲ್ಲಿ ನಾಲ್ಕು ವರ್ಷಗಳಲ್ಲಿ 3515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 2525 ರೈತರ ಸಾವಿಗೆ ಬರ ಹಾಗೂ ಬೆಳೆನಾಶವೇ ಕಾರಣ ಅಂತ ಕೃಷಿ ಇಲಾಖೆಯೇ ಹೇಳಿದೆ. ಈ ಸಮಸ್ಯೆಗಳ ಬಗ್ಗೆ ನೀವು ಯಾಕೆ ಮಾತನಾಡೋದಿಲ್ಲ ಎಂದು ಟ್ವೀಟರ್ನಲ್ಲಿ ಸಿಎಂ ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. (ಕೆ.ಎಸ್,ಎಸ್.ಎಚ್)