ಕರ್ನಾಟಕ

ಶೈಕ್ಷಣಿಕೇತರ ಕಾರ್ಯಕ್ರಮಗಳಿಂದ ಮಕ್ಕಳ ಜ್ಞಾನ ಹೆಚ್ಚಲಿದೆ: ನಳರಾಜು

ರಾಜ್ಯ(ಮಂಡ್ಯ)ಡಿ.27:-  ಮಕ್ಕಳಿಗೆ ಶೈಕ್ಷಣಿಕ ವಿಷಯ ಜತೆಗೆ ಶೈಕ್ಷಣಿಕೇತರ ಕಾರ್ಯಕ್ರಮಗಳನ್ನು ಹೆಚ್ಚು ಮಾಡುವುದರಿಂದ ಮಕ್ಕಳ ಜ್ಞಾನ ಮತ್ತಷ್ಟು ಅಭಿವೃದ್ದಿ ಹೊಂದಲಿದೆ ಎಂದು ಶುಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಟ್ರಸ್ಟಿ ನಳರಾಜು ಹೇಳಿದರು.

ತಾಲೂಕಿನ ಜಯಂತಿ ನಗರದ ಶ್ರೀಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್ ನ `ಪ್ರತಿಭಾ ಸಂಭ್ರಮ-2017-18ನೇ’ ಅಂಗವಾಗಿ ಶಾಲೆಯಲ್ಲಿ ವಿಜ್ಞಾನ ಹಾಗೂ ಚಿತ್ರಕಲಾ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯ ಮಕ್ಕಳು ವಿಜ್ಞಾನ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಇಷ್ಟೊಂದು ಸುಂದರವಾಗಿ ಮಾಡಿ, ವಿಜ್ಞಾನದ ಅವಿಷ್ಕಾರಗಳ ಮಾದರಿಗಳನ್ನು ಪ್ರದರ್ಶಿಸಿದ್ದಾರೆ ಮುಂದೆಯೂ ಸಹ ಇದೇರೀತಿ ವಿಜ್ಞಾನದ ಹೊಸಹೊಸ ಅವಿಷ್ಕಾರಗಳನ್ನು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಎಂ.ಪಂಚಲಿಂಗೇಗೌಡ ಮಾತನಾಡಿ, ಶಾಲೆಯಲ್ಲಿ ನಡೆಯುತ್ತಿರುವ ಪ್ರತಿಭಾಸಂಭ್ರಮ ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ವಿಜ್ಞಾನ ಹಾಗೂ ಚಿತ್ರಕಲಾ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಮಕ್ಕಳು ಅದ್ಭುತವಾದ ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದ್ದಾರೆ. ಮಕ್ಕಳ ಪ್ರತಿಭೆಗಳು ಹೀಗೆ ಸದಾ ಮುಂದುವರೆಯಲಿ ಎಂದು ತಿಳಿಸಿದರು.

ವಿಜ್ಞಾನ ವಸ್ತುಪ್ರದರ್ಶನದಲ್ಲಿ ನೀರಿ ಮತ್ತು ಗಾಳಿಯಿಂದ ವಿದ್ಯುತ್ ತಯಾರಿಸುವುದು, ಮಳೆನೀರು ಕೊಯ್ಲು, ಸೌರಶಕ್ತಿಯಿಂದ ವಿದ್ಯುತ್ ಬಳಕೆ, ಹನಿನೀರಾವರಿ ಪದ್ದತಿ, ಓಜೋನ್ ಪದರ, ವಿದ್ಯುತ್‍ನಿಂದ ನೀರು ಬಿಸಿಮಾಡುವುದು, ಮಳೆನೀರು ಸಂಗ್ರಹಣೆ ಮತ್ತು ಬಳಕೆ, ಮನೆ ಮುಂದೆ ಬೆಳೆಸಬಹುದಾದ ಔಷಧಿ ಸಸ್ಯಗಳು ಮತ್ತು ಅದರ ಬಳಕೆ, ದೇಹಕ್ಕೆ ಅಗತ್ಯವಿರುವ ಪ್ರೋಟಿನ್ ಅಂಶಗಳನ್ನು ಕೊಡುವಂತಹ ತರಕಾರಿ, ಹಣ್ಣುಗಳು, ವಾಯುಮಾಲಿನ್ಯ ನಿಯಂತ್ರಣ, ಮಾದರಿ ನಗರ, ಪಟ್ಟಣ ಮತ್ತು ಗ್ರಾಮಗಳ ನಿರ್ಮಾಣ, ನೀರುಶುದ್ದೀಕರಣ ಘಟಕಗಳು, ಮಾನವನ ದೇಹದ ಅಂಗಾಗಳ ಪರಿಚಯ, ಜಲಚರ ಪ್ರಾಣಿಗಳ ವಾಸಿಸು ಕುರಿತು, ವಿದ್ಯುತ್‍ಯಂತ್ರದ ಮೂಲಕ ವಾಹನ ಬಳಕೆ…… ಹೀಗೆ ವಿಜ್ಞಾನದಲ್ಲಿನ ಆವಿಷ್ಕಾರದ ಬಗ್ಗೆಯ ಹಲವು ಮಾದರಿಗಳನ್ನು ಪ್ರದರ್ಶಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: