ಸುದ್ದಿ ಸಂಕ್ಷಿಪ್ತ

ಶ್ರೀ ಬಸವಲಿಂಗಸ್ವಾಮಿಗಳಿಗೆ ವೀರಶೈವ ಮಠಾಧಿಪತಿಗಳ ಗೋಷ್ಠಿಯಿಂದ ಶ್ರದ್ದಾಂಜಲಿ

ಮೈಸೂರು, ಡಿ. 27 : ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವೀರಶೈವ ಮಠಾಧಿಪತಿಗಳ ಗೋಷ್ಠಿಯಿಂದ ಈಚೆಗೆ ನಿಧನರಾದ ಶೆಟ್ಟನಾಯಕನ ಹಳ್ಳಿಯ ಪಟ್ಟದ ಮಠದ ಸ್ವಾಮೀಜಿ ಶತಾಯುಷಿ ಶ್ರೀ ಬಸವಲಿಂಗಸ್ವಾಮಿಗಳ ಶ್ರದ್ಧಾಂಜಲಿ ಸಭೆಯನ್ನು ನಡೆಸಿತು.

ಜೆಎಸ್ಎಸ್ ಗುರುಕುಲದಲ್ಲಿ ಸಾಧಕರಾಗಿದ್ದ ಶ್ರೀಗಳು, ಇತ್ತೀಚೆಗಷ್ಟೇ ಸೇವೆಯಿಂದ ನಿವೃತ್ತರಾಗಿ  ವಿಶ್ರಾಂತ ಜೀವನ ನಡೆಸುತ್ತಿದ್ದರು, ಆಜಾತ ಶತ್ರುಗಳಾಗಿ ಮಿತಭಾಷಿಕರಾಗಿದ್ದ ಶ್ರೀಗಳು ಸರಳತೆಗೆ ಹೆಸರುವಾಸಿಯಾಗಿದ್ದರು, ಅವರ ಅಗಲುವಿಕೆಯಿಂದ ಸಮಾಜಕ್ಕೆ ಭಕ್ತರಿಗೆ ಉಂಟಾಗಿರುವ ದುಃಖವನ್ನು ಭರಿಸಲು ಭಗವಂತೆ ಶಕ್ತಿ ನೀಡಬೇಕೆಂದು ಕೋರಲಾಯಿತು. (ಕೆ.ಎಂ.ಆರ್)

Leave a Reply

comments

Related Articles

error: