ಕರ್ನಾಟಕಮೈಸೂರು

ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಮೈಸೂರು ವಿಭಾಗೀಯ ತಂಡ

ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ಜಿಲ್ಲೆ ವತಿಯಿಂದ ನಡೆದ ಮೈಸೂರು ವಿಭಾಗ ಮಟ್ಟದ 14 ವರ್ಷದೊಳಗಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈಸೂರು ತಂಡ ವಿಜಯ ಸಾಧಿಸಿದೆ. ಈ ಮೂಲಕ ನ.19 ಮತ್ತು 20 ರಂದು ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಅರ್ಹತೆ ಗಳಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮರಿಯಪ್ಪ ಅವರು ವಿಜೇತ ತಂಡಕ್ಕೆ ಶುಭಾಶಯ ಕೋರಿದರು. ದೈಹಿಕ ಶಿಕ್ಷಕರಾದ ಲಿಂಗರಾಜು, ತಿರುಮಲ್ಲೇಶ್ ಅವರೊಂದಿಗೆ ವಿಜೇತ ತಂಡದ ಸದಸ್ಯರಾದ ಲಿಖಿತ್ ಎಸ್ ಗೌಡ, ಪವನ್ ಎಚ್.ಎನ್, ಭುವನ್, ಯದುನಂದನ್, ಅಂಕಿತ್, ದುರ್ಗಾಪ್ರಸಾದ್ ಶೆಟ್ಟಿ, ಲಿಂಗೇಶ್, ಅಚ್ಚ್ಯುತ್, ವಿಜಯ್, ನಿರೇಶ್, ಹರ್ಷ ಅವರನ್ನು ಚಿತ್ರದಲ್ಲಿ ಕಾಣಬಹುದು.

 

Leave a Reply

comments

Related Articles

error: