ದೇಶ

ಗರ್ಭಾವಸ್ಥೆ ಲಿಂಗಪತ್ತೆ ಅಂತರ್‍ ಜಾಲ ಜಾಹೀರಾತುಗಳಿಗೆ ಕಡಿವಾಣ ಹಾಕಿ: ಕೇಂದ್ರಕ್ಕೆ ಸುಪ್ರಿಂ ಚಾಟಿ

ಲಿಂಗಾಧಾರಿತ ಗರ್ಭಪಾತ ತಡೆ ಹಿನ್ನೆಲೆಯಲ್ಲಿ ದೇಶದಲ್ಲಿ 1994 ರಿಂದಲೂ ಗರ್ಭಾವಸ್ಥೆಯಲ್ಲಿ ಲಿಂಗ ಪತ್ತೆ ಕಾನೂನು ಬಾಹಿರವಾಗಿದೆ. ಆದರೂ, ಅಂತರ್ ಜಾಲದಲ್ಲಿ ಈ ಬಗ್ಗೆ ರಾಜಾರೋಷವಾಗಿ ನಡೆಯುವ ವ್ಯವಹಾರವನ್ನು ಪ್ರಶ‍್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ನಡೆಸಿದ ಸುಪ್ರೀಂ ಕೋರ್ಟ್ ಕಠಿಣ ಆಜ್ಞೆಯನ್ನು ನೀಡಿದೆ. ಭ್ರೂಣಾವಸ್ಥೆಯಲ್ಲಿಯೇ ಮಗುವಿನ ಲಿಂಗಪತ್ತೆಗೆ ಮಾಹಿತಿ ಒದಗಿಸಲು ಹಲವು ವೆಬ್‍ಸೈಟ್, ಸರ್ಚ್ ಎಂಜಿನ್‍ಗಳಲ್ಲಿ ಇರುವ ಮಾಹಿತಿಯನ್ನು ಮೂವತ್ತಾರು ಗಂಟೆಯೊಳಗೆ ತೆಗೆದುಹಾಕುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಅಂತರ್‍ಜಾಲ ತಾಣಗಳಾದ ಗೂಗಲ್, ಯಾಹೂ ಮತ್ತು ಇತರೆ ವೆಬ್ ಸೈಟ್‍ಗಳಲ್ಲಿ ಭ್ರೂಣಾವಸ್ಥೆಯ ಲಿಂಗ ಪತ್ತೆ ಹಚ್ಚುವ ಉಪಕರಣಗಳ ಮಾರಾಟದ ಜಾಹೀರಾತುಗಳು ನೀಡುತ್ತಿರುವ ಬಗ್ಗೆ ಸಾಬುಮ್ಯಾಥ್ಯೂ ಚಾರ್ಜ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಭ್ರೂಣದ ಲಿಂಗಪತ್ತೆ ಕುರಿತಾದ ಉಪಕರಣಗಳು, ಕಿಟ್‍ಗಳು ಮತ್ತು ಆಸ್ಪತ್ರೆಗಳ ಮಾಹಿತಿ ನೀಡುವ ಜಾಹೀರಾತುಗಳ ವೆಬ್‍ಸೈಟ್‍ಗಳನ್ನು ನಿಷೇಧಿಸಬೇಕೆಂದು ಕೋರಿದ್ದರು. ಈ ಬಗ್ಗೆ ಕಳೆದ ಜುಲೈನಲ್ಲಿ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಅಂತರ್‍ಜಾಲ ತಾಣಗಳು ಕಾನೂನುನನ್ನು ಉಲ್ಲಂಘಿಸಿದೆ ಎಂದು ತಿಳಿಸಿತ್ತು. ಈ ಬಗ್ಗೆ ಮುಂದಿನ ವಿಚಾರಣೆಯನ್ನು ಜ.17ಕ್ಕೆ ಮುಂದೂಡಿದೆ.

Leave a Reply

comments

Related Articles

error: