ಕರ್ನಾಟಕ

ಪ್ರಾಚೀನ ಭಾರತ ಕುರಿತ ‘ ಪ್ರೊ.ಅಚ್ಯುತರಾವ್ ಸ್ಮರಣಾರ್ಥ ಇತಿಹಾಸ ಸಮ್ಮೇಳನ

ರಾಜ್ಯ(ಉಡುಪಿ) 27:-  ಎಂಸಿಪಿಎಚ್ (ಮಣಿಪಾಲ್ ಸೆಂಟರ್ ಫಾರ್ ಫಿಲಾಸಫಿ  ಆಂಡ್ ಹ್ಯುಮಾನಿಟೀಸ್) ಆವರಣದಲ್ಲಿ ಪ್ರೊ. ಅಚ್ಯುತರಾವ್ ಸ್ಮರಣಾರ್ಥ ಇತಿಹಾಸ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು.  ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಂಎಎಚ್‍ಇ) ಉಪಕುಲಪತಿ ಡಾ. ವಿನೋದ್ ಭಟ್ ಸಮ್ಮೇಳನ ಉದ್ಘಾಟಿಸಿದರು.

ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಇತಿಹಾಸ ತಜ್ಞರು ಮತ್ತು ಪ್ರಾಧ್ಯಾಪಕರೂ ಆಗಿದ್ದ ಪ್ರೊ. ಅಚ್ಯುತರಾವ್ ಪ್ರಸಿದ್ಧ ಇತಿಹಾಸಕಾರರೂ ಆಗಿದ್ದು, 1965ರಲ್ಲಿ ತಮ್ಮ 47ನೇ ವಯಸ್ಸಿನಲ್ಲಿ ನಿಧನರಾದ ಅಚ್ಯುತರಾವ್ ಅವರ ನೆನಪನ್ನು ಅಜರಾಮರಗೊಳಿಸುವ ದೃಷ್ಟಿಯಿಂದ ಡಿಎಸ್‍ಎ (ಡಿ.ಎಸ್. ಅಚ್ಯುತರಾವ್) ಸ್ಮಾರಕ ಟ್ರಸ್ಟ್‍ನ ಅಡಿಯಲ್ಲಿ 2017ರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪ್ರೊ. ಡಿ. ಎಸ್. ಅಚ್ಯುತರಾವ್ ಅವರ ಜೀವನ ಮತ್ತು ಸಾಧನೆಯ ಬಗ್ಗೆ ಅವರ ಮೊಮ್ಮಗಳು ಸುರಭಿ ಅವರು ವಿನ್ಯಾಸಗೊಳಿಸಿದ ವಸ್ತುಪ್ರದರ್ಶನಕ್ಕೆ ಮಣಿಪಾಲ ವಿವಿ ವಿಶ್ರಾಂತ ಕುಲಪತಿ ಪ್ರೊ. ಎಂ.ಎಸ್. ವಲಿಯಾಥನ್ ಚಾಲನೆ ನೀಡಿದರು. ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಉಪಿಂದರ್ ಸಿಂಗ್ ಮಾತನಾಡಿ ಪುರಾತನ ಕಾಲದಲ್ಲಿ ಭಾರತದಿಂದ ಏಷ್ಯಾದವರೆಗಿನ ಪಠ್ಯಗಳ ಮತ್ತು ರಾಜಕೀಯ ಬೆಳವಣಿಗೆಗಳ ಪ್ರಯಾಣವನ್ನು ಅರ್ಥಮಾಡಿಕೊಳ್ಳುವುದು ಈ ಸಹಸ್ರಮಾನದ ಬಗ್ಗೆ ನಮ್ಮ  ಗ್ರಹಿಕೆಯನ್ನು ಪುಷ್ಟೀಕರಿಸುತ್ತದೆ. ಪುರಾತನ ವಿಚಾರಗಳ ಚಲನೆಯನ್ನು ನಾವು ಪುನರ್ನಿರ್ಮಿಸಬೇಕಾದ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು. ಪ್ರಖ್ಯಾತ ವಿದ್ವಾಂಸರು ಮತ್ತು ಇತಿಹಾಸಕಾರರು ಮೆಗಾಲಿತ್ ಮತ್ತು ನಂತರ ಸ್ಮಾರಕಗಳು, ಅಥುಲಾದ ಮುಶಿಕಾವಂಶ ಮತ್ತು ಪುರಾತನ ಭಾರತೀಯರ ಐತಿಹಾಸಿಕ ಅರ್ಥ, ಆರಂಭಿಕ ಚಾಲುಕ್ಯ ಭೂದೃಶ್ಯಗಳು ಸೇರಿದಂತೆ ಅನೇಕ ವಿಷಯಗಳ ಮೇಲೆ ಪ್ರಬಂಧ ಪ್ರಸ್ತುತಪಡಿಸಿದರು.

ಎಂಎಎಚ್‍ಇ ಮುಖ್ಯಸ್ಥ ನಿಖಿಲ್ ಗೋವಿಂದ್ ಮಾತನಾಡಿ, `ಮಣಿಪಾಲದಲ್ಲಿ ಈ ಇತಿಹಾಸ ಸಮ್ಮೇಳನವನ್ನು ಹಮ್ಮಿಕೊಳ್ಳುವ ಮೂಲಕ ಎಂಎಎಚ್‍ಇ, ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದ ಇತಿಹಾಸಕಾರರು ಮತ್ತು ವಿದವಾಂಸರನ್ನು ಇಲ್ಲಿಗೆ ಕರೆತಂದಿದೆ. ಇದರಿಂದ ನಮ್ಮ ಸಂಸ್ಥೆಯ ಘನತೆ ಹೆಚ್ಚುವ ಜೊತೆಗೆ ಇತಿಹಾಸ ವಿದ್ಯಾರ್ಥಿಗಳಿಗೂ, ಬೋಧಕ ಸಿಬ್ಬಂದಿಗೂ ಅನುಕೂಲವಾಗಿದೆ’ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಅಚ್ಯುತರಾವ್ ಶತಮಾನೋತ್ಸವದ ಸಂಚಾಲಕ ಡಿ.ಎ. ಪ್ರಸನ್ನ, `ಶತಮಾನೋತ್ಸವದ ವರ್ಷದಲ್ಲಿ ನಡೆದ ಮೂರು ಸಮಾವೇಶಗಳಲ್ಲಿ 35 ಪ್ರಮುಖ ಇತಿಹಾಸದ ವಿದ್ವಾಂಸರು ಪಾಲ್ಗೊಂಡು ತಮ್ಮ ಅಮೂಲ್ಯ ಚಿಂತನೆಯನ್ನು ಹಂಚಿಕೊಂಡಿದ್ದಾರೆ.   ಈ ಮೂಲಕ ಆಧುನಿಕ, ಮಧ್ಯಕಾಲೀನ ಮತ್ತು ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಹೊಸ ಚಿಂತನೆಯನ್ನು ಉತ್ತೇಜಿಸಲು ಸಮಾವೇಶಗಳು ಸಾಕ್ಷಿಯಾಗಿವೆ. ಇವೆಲ್ಲ ಅಚ್ಯುತಾರಾವ್ ಅವರ ಸಂಶೋಧನಾ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ’ ಎಂದರು. (ಜಿ.ಕೆ.ಎಸ್,ಎಸ್.ಎಚ್)

Leave a Reply

comments

Related Articles

error: