
ಮೈಸೂರು
ಮೈಸೂರು ಮೃಗಾಲಯದಲ್ಲಿ ಸಿಂಹಿಣಿ ಸಾವು
ಮೈಸೂರು, ಡಿ.28:- ಮೈಸೂರು ಮೃಗಾಲಯದಲ್ಲಿನ ಸಿಂಹಿಣಿಯೊಂದು ಸಾವನ್ನಪ್ಪಿದೆ.
ಮೃಗಾಲಯದಲ್ಲಿದ್ದ ಏಳೂವರೆ ವರ್ಷ ಪ್ರಾಯದ ರೆನಿತಾ ಸಾವನ್ನಪ್ಪಿದ್ದು, ಜುನಾಗಢ ಮೃಗಾಲಯದಿಂದ ಕಳೆದ ಒಂದೂವರೆ ವರ್ಷದ ಹಿಂದೆ ಮೈಸೂರು ಮೃಗಾಲಯಕ್ಕೆ ತರಲಾಗಿತ್ತು. ಇತ್ತೀಚಿಗೆ ಸಂತಾನ್ಪೋತ್ಪತ್ತಿಗೆ ಗಂಡು ಸಿಂಹದೊಂದಿಗೆ ಬಿಡಲಾಗಿತ್ತು. ಮಿಲನದ ನಂತರ ಸಿಂಹಿಣಿ ನರ ಸಂಬಂಧಿ ತೊಂದರೆಗೆ ಒಳಗಾಗಿತ್ತು. ನಿನ್ನೆ ಸಂಜೆ.4.30ರ ವೇಳೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ ಎಂದು
ರೆನಿತಾ ಸಾವಿನ ಮಾಹಿತಿಯನ್ನು ಮೃಗಾಲಯದ ನಿರ್ದೇಶಕ ರವಿಶಂಕರ್ ಧೃಡಿಕರಿಸಿದ್ದಾರೆ. (ಕೆ.ಎಸ್,ಎಸ್.ಎಚ್)