ಮೈಸೂರು

ಮೈಸೂರಿನಲ್ಲಿ ಮುಂದಿನ ನಾಲ್ಕು ದಿನ ತುಂತುರು ಮಳೆ ಸಾಧ್ಯತೆ

ಮೈಸೂರು ಜಿಲ್ಲೆಯಲ್ಲಿ ಜನರು ಬಿಸಿಲಿನ ಬೇಗೆಗೆ ಬಳಲಿ ಬೆಂಡಾಗಿದ್ದು, ಈ ವಾರ ಮಳೆರಾಯ ಸ್ವಲ್ಪ ಕೃಪೆ ತೋರಿ ತಂಪೆರುವ ನಿರೀಕ್ಷಿಯಿದೆ. ನ.17ರಿಂದ 20ರವರೆಗೆ ಮಳೆಯಾಗಲಿದೆ ಎಂದು ನಾಗನಹಳ್ಳಿ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ.

ದಿನದ ಉಷ್ಣಾಂಶ 31 ರಿಂದ 32 ಡಿಗ್ರಿ ಸೆಲ್ಸಿಯಸ್‍, ರಾತ್ರಿಯ ಉಷ್ಣಾಂಶ 16ರಿಂದ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೆಳಗಿನ ವೇಳೆಯ ತೇವಾಂಶ ಶೇ.70ರಿಂದ 80 ಇರಲಿದ್ದು, ಮಧ್ಯಾಹ್ನದ ಬಳಿಕ ಶೇ.50ರಿಂದ 58 ಇರುವ ನಿರೀಕ್ಷೆಯಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 2ರಿಂದ 5 ಕಿಮೀ ಇರಲಿದೆ.

ರೈತರಿಗೆ ಸಲಹೆಗಳು: ರೇಷ್ಮೆ ಮತ್ತು ಕೋಳಿ ಸಾಕಾಣಿಕೆ ಕೊಠಡಿಗಳಲ್ಲಿ ಗರಿಷ್ಠ ತಾಪಮಾನ ಇರುವಂತೆ ನೋಡಿಕೊಳ್ಳಬೇಕು. ಟೊಮೆಟೋ, ಮೆಣಸಿನಕಾಯಿ ಮತ್ತು ಕ್ಯಾಪ್ಸಿಕಂ ಬೆಳಗಳು ಹೂಬಿಡುವ ಹಂತದಲ್ಲಿರುವುದರಿಂದ ಹುಳದ ಬಾಧೆ ತಗುಲದಂತೆ ರಾಸಾಯನಿಕ ಸಿಂಪಡಿಸುವಂತೆ ಸೂಚಿಸಲಾಗಿದೆ.

ಪಾರಾಮೀಟರ್17.11.201618.11.201619.11.201620.11.2016
ಮಳೆ(ಮಿ.ಮೀಗಳಲ್ಲಿ)5000
ಗರಿಷ್ಠ ಉಷ್ಣಾಂಶ ಡಿ.ಸೆ.31323232
ಕನಿಷ್ಠ ಉಷ್ಣಾಂಶ ಡಿ.ಸೆ19181816
ಆಕಾಶದ ಸ್ಥಿತಿ4322
ತೇವಾಂಶ(%)0830ಗಂಟೆಗಳಲ್ಲಿ75707068
ತೇವಾಂಶ(%)1730ಗಂಟೆಗಳಲ್ಲಿ55525050
ಗಾಳಿಯ ವೇಗ4244
ಗಾಳಿಯ ದಿಕ್ಕು70707070

 

Leave a Reply

comments

Related Articles

error: