ಮೈಸೂರು

ದಾನಮ್ಮ ಅತ್ಯಾಚಾರ ಆರೋಪಿಗಳನ್ನು ಬಂಧಿಸಲು ಒತ್ತಾಯ

ಮೈಸೂರು,ಡಿ.28:- ವಿಜಯಪುರದ ದಾನಮ್ಮಳ ಮೇಲೆ  ಅತ್ಯಾಚಾರ ನಡೆಸಿ ಕೊಲೆಗೈದಿರುವುದನ್ನು ಖಂಡಿಸಿ ಏಕಾಂಗಿಯಾಗಿ ವ್ಯಕ್ತಿಯೋರ್ವರು ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎಲೆಕ್ಟ್ರೀಶಿಯನ್ ನಾಗರಾಜು ಎಂಬವರು ಮಾತನಾಡಿ ದಲಿತರ ಮೇಲಿನ ಶೋಷಣೆ, ಅತ್ಯಾಚಾರಗಳಂತಹ ಹೇಯಕೃತ್ಯಗಳು ಹೆಚ್ಚುತ್ತಿವೆ. ಸರ್ಕಾರ ಕೂಡಲೇ ಎಚ್ಚೆತ್ತು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಕೂಡಲೇ ದಾನಮ್ಮ‌ ಸಾವಿಗೆ ಕಾರಣರಾದ ಆರು ಜನರಿಗೆ ಕಾನೂನು ಮೂಲಕ ಶಿಕ್ಷೆ ನೀಡುವಂತೆ ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: