ಮೈಸೂರು

ಮೂಲಭೂತ ಸೌಕರ್ಯ ವಂಚಿತ ಶಿವರಾತ್ರೀಶ್ವರ ನಗರ

ಜ.20ರೊಳಗೆ ಕ್ರಮಕ್ಕೆ ಒತ್ತಾಯ - ಪ್ರತಿಭಟನೆಯ ಎಚ್ಚರಿಕೆ

ಮೈಸೂರು, ಡಿ. 28 : ನಗರದ ಬನ್ನಿಮಂಟಪದ ಬಿ ಬಡಾವಣೆಯೆಂದು ಗುರುತಿಸ್ಪಡುವ ಶಿವರಾತ್ರೇಶ್ವರ ನಗರವೂ ಮೂಲಭೂತ ಸೌಕರ್ಯದಿಂದ ಸಂಪೂರ್ಣ ವಂಚಿತವಾಗಿದ್ದು, ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಶಿವರಾತ್ರೇಶ್ವರನಗರ ರೆಸಿಡೆನ್ಸಿಯಲ್ ಫೋರಮ್ ಕಾರ್ಯದರ್ಶಿ ಸೈಯದ್ ರಹಮತ್ ಉಲ್ಲಾ ದೂರಿದರು.

ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಾರ್ಡ್ ನಂ.45ರ ವ್ಯಾಪ್ತಿಗೊಳಪಡುವ ಶಿವರಾತ್ರೀಶ್ವರ ಬಡಾವಣೆಯಲ್ಲಿ ಸೂಕ್ತ ರಸ್ತೆಯಿಲ್ಲ, ಒಳಚರಂಡಿಯಿಲ್ಲ, ಕುಡಿಯುವ ನೀರಿಲ್ಲ, ವಿದ್ಯುತ್ ದೀಪಗಳಿಲ್ಲ, ನಿರ್ವಹಣೆಯಿಲ್ಲದೇ ಉದ್ಯಾನವನಗಳು ಕಾಡುಗಳಂತಾಗಿದ್ದು ಮಹಿಳೆಯರು ಸೇರಿದಂತೆ ವಾಯುವಿಹಾರಿಗಳಿಗೂ ಆತಂಕ ಮೂಡಿಸುತ್ತಿವೆ ಎಂದು ಅವರು ತಿಳಿಸಿದರು.

ಕಳೆದ 36 ವರ್ಷಗಳ ಹಿಂದ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾದ ಬಡಾವಣೆಗೆ ಇಂದಿಗೂ ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲದೇ ಅದೇ ದುರಂತ ಸ್ಥಿತಿಯಲ್ಲಿದೆ,  ಮಹಾನಗರ ಪಾಲಿಕೆಗೆ ಕಂದಾಯ, ವಿದ್ಯುತ್ ಬಿಲ್ ಪಾವತಿಸುತ್ತಿದ್ದರೂ ನಿಷ್ಪ್ರಯೋಜಕವಾಗಿದ್ದು, ಸ್ಥಳೀಯ ಸಮಸ್ಯೆಯ ಬಗ್ಗೆ  ಉಸ್ತುವಾರಿ ಸಚಿವರಿಗೆ, ಪಾಲಿಕೆ ಆಯುಕ್ತರಿಗೆ, ಮಹಾಪೌರರರು ಸೇರಿದಂತೆ ಪಾಲಿಕೆ ಸದಸ್ಯರಿಗೂ ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದ ಅವರು, ಜ.20ರೊಳಗೆ ನಮ್ಮ ಮನವಿಯನ್ನು ಪುರಸ್ಕರಿಸಿ ಮಹಾ ನಗರ ಪಾಲಿಕೆ ಕಾಮಗಾರಿಗಳಿಗೆ ಚಾಲನೆ ನೀಡಬೇಕು, ಇಲ್ಲವಾದಲ್ಲಿ ಮೈಸೂರು-ಬೆಂಗಳೂರು ಟೋಲ್ ಗೇಟ್ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಫೋರಮ್ ನ ಜಂಟಿ ಕಾರ್ಯದರ್ಶಿ ದಾಕ್ಷಾಯಿಣಿ, ಖಜಾಂಚಿ ಸೀಮಾರಾಣಿ, ನಿರ್ದೇಶಕ ಶ್ರೀನಿವಾಸ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: