ಕರ್ನಾಟಕಮೈಸೂರು

ನಿರುದ್ಯೋಗಿ ಯುವಕರಿಗೆ ರೈಲ್ವೆ ಇಲಾಖೆಯಿಂದ ಸುವರ್ಣಾವಕಾಶ: ಪ್ರವಾಸೋದ್ಯಮ-ಆತಿಥ್ಯ ಕ್ಷೇತ್ರದ ಉಚಿತ ಕೋರ್ಸ್ ಆರಂಭ

ಕೇಂದ್ರ ಪ್ರವಾಸೋದ್ಯಮ ಇಲಾಖೆಯ ‘ಹುನರ್ ಸೆ ರೋಜ್‍ಗಾರ್’ ಯೋಜನೆಯ ಅಡಿಯಲ್ಲಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ಲಿಮೆಟೆಡ್ – ಐಆರ್‍ಟಿಸಿ ವತಿಯಿಂದ ಮೈಸೂರಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದ ಕೋರ್ಸ್ ಆರಂಭವಾಗಿವೆ.

ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿನ ಕುಶಲ ಮಾನವ ಸಂಪನ್ಮೂಲದ ಕೊರತೆ ನೀಗಿಸಲು ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ.

ಕಳೆದ 2012ನೇ ಸಾಲಿನಿಂದಲೂ ‘ಐಆರ್‍ಟಿಸಿ’ಯು ಹುನರ್‍-ಸೆ-ರೋಜ್‍ಗಾರ್‍ ಯೋಜನೆ ಅಡಿಯಲ್ಲಿ ಕೋರ್ಸುಗಳನ್ನು ನಡೆಸುತ್ತಿದೆ. ಈ ತನಕ 1100 ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡುವ ಮೂಲಕ ವೃತ್ತಿ ನೈಪುಣ್ಯತೆ ಸಾಧಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ.

18 ರಿಂದ 28 ವರ್ಷದೊಳಗಿನ ಕನಿಷ್ಠ 8ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ನಿರುದ್ಯೋಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. “ಫೂಡ್ ಅಂಡ್ ಬೆವರೇಜ್ ಸರ್ವೀಸ್” ಕುರಿತ ಆರು ವಾರಗಳ ತರಬೇತಿಯ ಸಮಯದಲ್ಲಿ 1500/- ರು. ಗಳ ಶಿಷ್ಯ-ವೇತನ ನೀಡಲಾಗುವುದು.

ತರಬೇತಿಯ ಅಂತ್ಯದಲ್ಲಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ನಿಯಮಾನುಸಾರ ಪರೀಕ್ಷೆ ನಡೆಯಲಿದ್ದು, ಯಶಸ್ವಿಯಾಗಿ ತರಬೇತಿ ಪಡೆದವರಿಗೆ ಕೋರ್ಸ್‍ ಪರಿಪೂರ್ಣಗೊಳಿಸಿದ ಪ್ರಮಾಣಪತ್ರ ನೀಡಲಾಗುವುದು.

ಕೋರ್ಸುಗಳಿಗೆ ಈಗಾಗಲೇ ಪ್ರವೇಶ ಆರಂಭವಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಮೊದಲ ತಂಡದ ತರಬೇತಿ ಆರಂಭವಾಗಲಿದೆ. ಅರ್ಜಿ ಸಲ್ಲಿಕೆ ಅಥವಾ ಪ್ರವೇಶ ಸಂಬಂಧ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ ದೂರವಾಣಿ ಸಂಖ್ಯೆ: 97414 21486/97414 25781/ 0821-2426001 ಅಥವಾ ಐಆರ್ಟಿಸಿ ಕಚೇರಿ, ಟಿಕೆಟ್ ಬುಕಿಂಗ್ ಕಚೇರಿ ಸಮೀಪ, ಮೈಸೂರು ರೈಲ್ವೇ ನಿಲ್ದಾಣ – ಈ ವಿಳಾಸವನ್ನು ಸಂಪರ್ಕಿಸಬಹುದು.

Leave a Reply

comments

Related Articles

error: