ಕರ್ನಾಟಕ

20 ಸಾವಿರ ರೂ.ಗೆ ಹಸುಗೂಸು ಮಾರಾಟ: ಆರೋಪಿಗಳ ಬಂಧನ

ದಾವಣಗೆರೆ,ಡಿ.28: ಮೂರು ದಿನಗಳ ಹಸುಗೂಸನ್ನು 20 ಸಾವಿರ ರೂ. ಗೆ ಮಾರಾಟ ಮಾಡುತ್ತಿದ್ದ ಪ್ರಕರಣ ನಗರದ ಅಜಾದ್ ನಗರದಲ್ಲಿ ನಡೆದಿದೆ.

ನಗರದ  ಸಬೀನಾ ಹಾಗೂ ಸಿಕಂದರ್ ದಂಪತಿಯ ಮೂರು ದಿನಗಳ ಮಗುವನ್ನು ಮುಕ್ತಾರ್ ಎಂಬ ವ್ಯಕ್ತಿಗೆ ಮಾರಾಟ ಮಾಡಲು ಮುಂದಾಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಮಗು ಮಾರಾಟ ಮಾಡುವ ಕುರಿತು ಖಚಿತ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸರು ಮಗುವನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ವರದಿ: ಪಿ.ಎಸ್ )

Leave a Reply

comments

Related Articles

error: