ಕರ್ನಾಟಕಮೈಸೂರು

ರಾಜ್ಯ ಮಟ್ಟದ ಕನ್ನಡ ಭಾವಗೀತೆ ಗಾಯನ ಸ್ಪರ್ಧೆ

ಮೈಸೂರಿನ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಮತ್ತು ರೋಟರಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 22ನೇ ರಾಜ್ಯಮಟ್ಟದ ಕನ್ನಡ ಭಾವಗೀತೆ ಗಾಯನ ಸ್ಪರ್ಧೆಯನ್ನು ಸೆಪ್ಟೆಂಬರ್ 18ರಂದು ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆ ಸಮೀಪ ರೋಟರಿ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ವೃತ್ತಿಪರ, ಆಕಾಶವಾಣಿ ಹಾಗೂ ದೂರದರ್ಶನದಿಂದ ಮಾನ್ಯತೆ ಪಡೆದ ಕಲಾವಿದರ ಹೊರತಾಗಿ 8 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸೆಪ್ಟೆಂಬರ್ 16ರೊಳಗಾಗಿ ಪ್ರವೇಶ ಶುಲ್ಕ 100 ರೂ.ಗಳೊಂದಿಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಮತ್ತು  ನೋಂದಣಿಗಾಗಿ ಶ್ರೀ ಸ್ಕ್ರೀನ್ & ಆಫ್‍ಸೆಟ್ ಪ್ರಿಂಟರ್ಸ್ ನಂಬರ್ 21, 2ನೇ ಮುಖ್ಯರಸ್ತೆ, 11ನೇ ಕ್ರಾಸ್ ವಿದ್ಯಾರಣ್ಯಪುರಂ, ಮೈಸೂರು -8, ಮೊ.ಸಂ. 7349403794, ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ನಂ.76, ಜಯಲತ, 4ನೇ ಮುಖ್ಯ ರಸ್ತೆ, ಮಾರುತಿ ದೇವಸ್ಥಾನದ ರಸ್ತೆ, ಸರಸ್ವತಿಪುರಂ, ಮೈಸೂರು-9 ದೂ.ಸಂ. 0821-2544807, ಕೆ. ರಾಮಮೂರ್ತಿರಾವ್ ನಂ. 327, ನೂಪುರ, 21ನೇ ಮೇನ್, ಜೆ.ಪಿ.ನಗರ. ಮೈಸೂರು. ಮೊ.ಸಂ.9886379314ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: