ಮೈಸೂರು

ಕನಕದಾಸರ ಜೀವನ, ತತ್ವ,ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ಪ್ರೊ.ಟಿ.ಎಲ್. ಜಗದೀಶ್

ನಗರದ ಮಹಾರಾಣಿ ಕಲಾ ಕಾಲೇಜಿನ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಸಂತ ಕವಿ ಕನಕ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಪ್ರೊ.ಟಿ.ಎಲ್. ಜಗದೀಶ್ ಮಾತನಾಡಿ, ಕನಕದಾಸರು ಸಾಮಾಜಿಕ ಸುಧಾರಕರಾಗಿದ್ದು, ಅಂದಿನ ದಿನಗಳಲ್ಲಿ ಚಾಲ್ತಿಯಲ್ಲಿದ್ದ ಸಾಮಾಜಿಕ ಅನ್ಯಾಯ ತೊಡೆದು ಹಾಕಲು ಹೋರಾಡಿದರು ಎಂದು ಹೇಳಿದರು.

ಕನಕರ ಜೀವನ, ಅವರ ತತ್ವ, ಸಮಾಜದ ಮೇಲೆ ಅವುಗಳ ಪರಿಣಾಮ ಕುರಿತಂತೆಯೂ ಮಾತನಾಡಿದ ಅವರು, ಕನಕರ ರಚನೆಗಳು ಭಕ್ತಿ ಆಯಾಮ ವಿವರಿಸುವುದರ ಜೊತೆಗೆ ಸಮಾಜ ಸುಧಾರಣೆಗೆ ಸಂದೇಶವನ್ನೂ ನೀಡುತ್ತವೆ. ಅವು ಬಹಿರಂಗ ಆಚರಣೆ ಖಂಡಿಸುವುದರ ಜೊತೆಗೆ ನೈತಿಕ ನಡೆತೆಗೂ ಪ್ರಾಮುಖ್ಯತೆ ನೀಡುತ್ತವೆ ಎಂದು ವಿವರಿಸಿದರು.

ಅಲ್ಲದೆ, ಮುಂದಿನ ಪೀಳಿಗೆಗೆ ಅನುಕೂಲವಾಗುವ ಉದ್ದೇಶದಿಂದ ಕನಕರ ಸಮಗ್ರ ರಚನೆಗಳ ಅಧ್ಯಯನ ಅಗತ್ಯವಾಗಿದ್ದು, ಕನಕರ ಜಯಂತಿ ಆಚರಣೆ ಕೇವಲ ಅವರ ಸ್ಮರಣೆ ಅಗಬಾರದು. ಬದಲಾಗಿ ಸಮಾಜ ಸುಧಾರಣೆಗೆ ಅವರು ನೀಡಿದ ಕೊಡುಗೆ ನೆನಪು ಸಹ ಆಗಬೇಕು. ಅವರ ಸ್ಮರಣೆ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಅಗತ್ಯವಾದ ರೀತಿಯೂ ಆಗಿರಬೇಕೆಂದರು.

ಕಾಲೇಜು ಪ್ರಾಚಾರ್ಯ ಬಿ.ಟಿ. ವಿಜಯ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಬಸವರಾಜು, ಖಜಾಂಚಿ ವಿಜಯಲಕ್ಷ್ಮಿ ಮತ್ತು ಕುಮಾರಿ ಇದ್ದರು.

Leave a Reply

comments

Related Articles

error: