ಮೈಸೂರು

ರಾಷ್ಟ್ರಕವಿ ಕುವೆಂಪು ಜನ್ಮದಿನದ ಪ್ರಯುಕ್ತ ಕುವೆಂಪು ಅವರ ಪ್ರತಿಮೆಗೆ ಮಾಲಾರ್ಪಣೆಗೈದು ಗೌರವ ಅರ್ಪಣೆ

ಮೈಸೂರು,ಡಿ.29:- ರಾಷ್ಟ್ರಕವಿ ಕುವೆಂಪುರವರ 113 ನೇ ಜನ್ಮದಿನದ ಪ್ರಯುಕ್ತ ಗನ್ ಹೌಸ್ ವೃತ್ತದಲ್ಲಿ ಇರುವ ವಿಶ್ವ ಮಾನವ ಉದ್ಯಾನವನದಲ್ಲಿರುವ ಕುವೆಂಪು ಅವರ ಪ್ರತಿಮೆಗೆ ಮಾಜಿ ಸಚಿವ ಎಸ್.ಎ.ರಾಮದಾಸ್ ಮಾಲಾರ್ಪಣೆಗೈದು ಗೌರವ ಅರ್ಪಿಸಿದರು.

ಈ ಸಂದರ್ಭ ಮಾತನಾಡಿದ ಅವರು ಈ ವಿಶಿಷ್ಟ ದಿನದಂದು ಗೂಗಲ್ ಡೂಡಲ್ ಮೂಲಕ ಕುವೆಂಪು ಅವರಿಗೆ ವಿಶೇಷ ಗೌರವ ಸಲ್ಲಿಸಿರುವುದು ಸಂತೋಷದ ವಿಷಯ. ಕವಿಶೈಲದ ಪ್ರಕೃತಿಯ ಮಡಲಲ್ಲಿ ಬಂಡೆಯ ಮೇಲೆ ಕುಳಿತು ಕುವೆಂಪು ಸಾಹಿತ್ಯ ಸೃಷ್ಟಿಸುತ್ತಿರುವ ಚಿತ್ರವನ್ನು ಡೂಡಲ್ಗೆ ಬಳಸಿಕೊಳ್ಳಲಾಗಿದೆ. ಅವರು ವಿಶ್ವಮಾನವ ಸಂದೇಶವನ್ನು ಸಾರಿದ ಮಹಾನ್ ಕವಿಗಳು ಎಂದು ಬಣ್ಣಿಸಿದರು.

ಈ ಸಂದರ್ಭ ನಗರ ಪಾಲಿಕೆ ಸದಸ್ಯ ಮತ್ತು ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಬಿ ವಿ ಮಂಜುನಾಥ್ , ಉಪಾಧ್ಯಕ್ಷ  ಹಾಗೂ ನಗರ ಪಾಲಿಕೆ ಸದಸ್ಯ  ಜಗದೀಶ್ನಗರ ಪಾಲಿಕೆ ಸದಸ್ಯರಾದ ವನಿತಾ ಪ್ರಸನ್ನ, ನಗರ ಯುವ ಮೋರ್ಚಾ ಉಪಾಧ್ಯಕ್ಷರಾದ   ಹೇಮಂತ್,ವಡಿವೇಲು, ಜೋಗಿ ಮಂಜು, , ಕಾರ್ಯದರ್ಶಿಗಳಾದ ಸಂತೋಷ್ ಶಂಭು , ವಾರ್ಡ್ ಅಧ್ಯಕ್ಷರುಗಳಾದ ಗುರುರಾಜ್, ಶೇಷಾದ್ರಿ, ಗಿರಿ, ವೆಂಕಟೇಶ್, ಸುಭಾಷ್, ಚಂದ್ರು. ಎನ್ ಆರ್ ಮಂಡಲದ    ಅಧ್ಯಕ್ಷ ಸು ಮುರುಳಿ, ಪ್ರಧಾನಕಾರ್ಯದರ್ಶಿ  ಮಂಜು ಸಿ ಗೌಡ  ಉಪಸ್ಥಿತರಿದ್ದರು . (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: