ಸುದ್ದಿ ಸಂಕ್ಷಿಪ್ತ
ಮಹಿಳಾ ಕಲಾವಿದೆಯರ ಸಂಘದ ವಾರ್ಷಿಕೋತ್ಸವ ಡಿ.30
ಮೈಸೂರು, ಡಿ. 29 : ಮೈಸೂರು ಜಿಲ್ಲಾ ವೃತ್ತಿ ಕನ್ನಡ ರಂಗಭೂಮಿ, ಮಹಿಳಾ ಕಲಾವಿದೆಯರ ಸಂಘದ 29ನೇ ವರ್ಷದ ವಾರ್ಷಿಕೋತ್ಸವದವನ್ನು ಡಿ.30ರ ಮಧ್ಯಾಹ್ನ 1 ಗಂಟೆಗೆ ಪುರಭವನದಲ್ಲಿ ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ವೆಂಗಿಪುರ ನಂಬಿಮಠದ ಶ್ರೀಇಳೈ ಆಳ್ವಾರ್ ಸ್ವಾಮೀಜಿ ಸಾನಿಧ್ಯ ವಹಿಸುವರು, ಕನ್ನಡ ಚಳುವಳಿಗಾರ ತಾಯೂರು ವಿಠ್ಠಲಮೂರ್ತಿ ಅಧ್ಯಕ್ಷತೆ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಉದ್ಘಾಟಿಸುವರು. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ ಮೊದಲಾದವರು ಭಾಗವಹಿಸುವರು. ನಂತರ ಮೋಹಿನಿ ಭಸ್ಮಾಸುರ ಪೌರಾಣಿಕ ನಾಟಕ ಪ್ರದರ್ಶನವಾಗುವುದು. (ಕೆ.ಎಂ.ಆರ್)