ಮೈಸೂರು

ಬೈಕ್ ಗೆ ಬಸ್ ಡಿಕ್ಕಿ ಸವಾರ ಸ್ಥಳದಲ್ಲೇ ಸಾವು

ಮೈಸೂರು,ಡಿ.30:- ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ ಬೈಕ್ ಸಾರಿಗೆ ಬಸ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ  ಸಾವನ್ನಪ್ಪಿದ್ದು, ಇನ್ನೋರ್ವ ಸವಾರ ಗಾಯಗೊಂಡ  ಘಟನೆ ನಡೆದಿದೆ.

ಮೃತರನ್ನು ಬೆಂಗಳೂರಿನ ನಂದಶರ್ಮಾ (45) ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಪ್ರಸನ್ನಕುಮಾರ್‌ ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶರ್ಮಾ ತಾಯಿಯನ್ನು ನೋಡಲು ಮೈಸೂರಿಗೆ ಬಂದಿದ್ದರು.ಸಿದ್ದಾರ್ಥ ಹೋಟೆಲ್‌ ಕಡೆಯಿಂದ ಬೈಕ್ ಮಿರ್ಜಾ ರಸ್ತೆಯತ್ತ ತಿರುಗಿತ್ತು. ಈ ಸಂದರ್ಭ ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದ ಬಸ್‌ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದರು. ಶರ್ಮಾ ಮೇಲೆ ಬಸ್ಸಿನ ಹಿಂಬದಿಯ ಚಕ್ರ ಹರಿದಿತ್ತು. ಇದರಿಂದ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ದೇವರಾಜ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: