ದೇಶ

ತಾರಕಕ್ಕೇರಿದ ಪೊಲೀಸ್ ಪೇದೆ-ಶಾಸಕಿಯ ಕಪಾಳ ಮೋಕ್ಷ ಪ್ರಕರಣ: ಇಬ್ಬರ ವಿರುದ್ಧ ಐಫ್ ಐಆರ್ ದಾಖಲು

ಹಿಮಾಚಲ ಪ್ರದೇಶ,ಡಿ.30-ಶಾಸಕಿ ಆಶಾ ಕುಮಾರಿ ಹಾಗೂ ಮಹಿಳಾ ಪೊಲೀಸ್ ಪೇದೆ ಇಬ್ಬರ ನಡುವಿನ ಕಪಾಳ ಮೋಕ್ಷ ಪ್ರಕರಣ ತಾರಕಕ್ಕೇರಿದ್ದು, ಇಬ್ಬರು ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದಾರೆ.

ಶಾಸಕಿ ಆಶಾ ಕುಮಾರಿ ಹಾಗೂ ಮಹಿಳಾ ಪೊಲೀಸ್ ಪೇದೆ ವಿರುದ್ಧ ಐಫ್ ಐಆರ್ ದಾಖಲಿಸಿಕೊಂಡಿರುವ ಶಿಮ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಸಕಿ ಆಶಾ ಕುಮಾರಿ, ಜನರ ನೂಕು ನುಗ್ಗಲು ನಡುವೆ ಆ ಮಹಿಳಾ ಪೊಲೀಸ್ ಪೇದೆ ಉದ್ದೇಶಪೂರ್ವಕವಾಗಿಯೇ ನನ್ನನ್ನು ತಳ್ಳಿದರಲ್ಲದೆ, ನನ್ನ ಮೇಲೆ ಹಲ್ಲೆ ಮಾಡಿದರು. ಹೀಗಾಗಿ ದೂರು ನೀಡಿದ್ದೇನೆ ಎಂದಿದ್ದಾರೆ.

ನಾನು ನನ್ನ ಕರ್ತವ್ಯ ಮಾಡುತ್ತಿದೆ. ಜನರನ್ನು ನಿಯಂತ್ರಿಸುತ್ತಿದ್ದಾಗ ಮಹಿಳೆ ಏಕಾಏಕಿ ನನಗೆ ಮೂರು ಬಾರಿ ಕಪಾಳಕ್ಕೆ ಹೊಡೆದರು. ಈ ಸಂದರ್ಭದಲ್ಲಿ ನನ್ನ ಆತ್ಮರಕ್ಷಣೆಗಾಗಿ ನಾನು ಹೊಡೆದೆ. ಆಕೆ ಯಾರೆಂಬುದು ನನಗೆ ತಿಳಿದಿರಲಿಲ್ಲ. ನನಗೆ ನನ್ನ ಕರ್ತವ್ಯ ಮುಖ್ಯವಾಗಿತ್ತು. ಆಕೆಯ ವಿರುದ್ಧ ದೂರು ನೀಡಿದ್ದು, ನನಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಚುನಾವಣಾ ಸೋಲಿನ ಪರಮಾರ್ಶೆ ಸಭೆಯನ್ನು ನಡೆಸುತ್ತಿದ್ದರು. ಈ ವೇಳೆ ಹಲವು ಶಾಸಕರು ಹಾಗೂ ಪಕ್ಷದ ನಾಯಕರನ್ನು ಸಭೆಗೆ ಕರೆದಿದ್ದರು. ಆಶಾ ಕುಮಾರಿ ಕೂಡ ಸಭೆಗೆ ಹಾಜರಾಗುವ ಸಲುವಾಗಿ ಸ್ಥಳಕ್ಕೆ ತೆರಳಿದ್ದರು. ಆದರೆ, ಪೊಲೀಸರು ಸಭೆಯಲ್ಲಿ ಪಾಲ್ಗೊಳ್ಳಲು ಆಶಾ ಕುಮಾರಿಯವರಿಗೆ ಅವಕಾಶ ನೀಡಿಲ್ಲ. ಇದರಿಂದಾಗಿ ಆಕ್ರೋಶಗೊಂಡಿದ್ದ ಆಶಾ ಕುಮಾರಿಯವರು ಸ್ಥಳದಲ್ಲಿದ್ದ ಮಹಿಳಾ ಪೇದೆಯ ಕಪಾಳಕ್ಕೆ ಹೊಡೆದಿದ್ದರು. ಇದರ ಬೆನ್ನಲ್ಲೇ ಮಹಿಳಾ ಪೊಲೀಸ್ ಕೂಡ ಆಕೆಗೆ ಕಪಾಳ ಮೋಕ್ಷ ಮಾಡಿದ್ದರು. (ವರದಿ-ಎಂ.ಎನ್)

Leave a Reply

comments

Related Articles

error: