ಕರ್ನಾಟಕ

ನಿಂತ ಲಾರಿಗೆ ಕಾರು ಡಿಕ್ಕಿ : ನಾಲ್ವರ ಸಾವು

ಬಾಗಲಕೋಟೆ,ಡಿ.30: ಕಾರು ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಸೋಲಾಪುರ್- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಹುನಗುಂದ ಪಟ್ಟಣದ ಸಾಯಿ ಮಂದಿರದ ಬಳಿ ಸಂಭವಿಸಿದೆ.

ಪಂಕಜ್ ಸಿಂಗಿ (48), ಉಮಾಬಾಯಿ ಸಿಂಗಿ (48), ಪುಷ್ಪಾಬಾಯಿ ಧರಕ್ (62), ಹಾಗೂ ಶ್ರೀಕಾಂತಾಬಾಯಿ ಧರಕ್ (65) ಮೃತ ದುರ್ದೈವಿಗಳು. ಅಪಘಾತದಲ್ಲಿ ದೀಪಕ್, ಸುನಿಲ್ ಹಾಗೂ ಶ್ರೀಧರ್ ಎಂಬ ಮೂವರಿಗೆ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಬಾಗಲಕೋಟೆಯ ಕುಮಾರೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಳ್ಳಾರಿಯಿಂದ ನಿಶ್ಚಿತಾರ್ಥ ಮುಗಿಸಿಕೊಂಡು ಬಾಗಲಕೋಟೆಗೆ ಹಿಂದಿರುಗುತ್ತಿದ್ದ  ಸಂದರ್ಭದಲ್ಲಿ ಕಾರು ನಿಂತ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಹುನಗುಂದ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ( ವರದಿ: ಪಿ.ಜೆ )

Leave a Reply

comments

Related Articles

error: