ಪ್ರಮುಖ ಸುದ್ದಿಮೈಸೂರು

ಸಂವಿಧಾನದ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು : ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ವಿ.ಶ್ರೀನಿವಾಸ್ ಪ್ರಸಾದ್ ಅಸಮಾಧಾನ

ಮೈಸೂರು,ಡಿ.30:- ಭಾರತೀಯ ಸಂವಿಧಾನದ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಇತ್ತೀಚೆಗೆ ಸಂವಿಧಾನ ಕುರಿತು ನೀಡಿರುವ ಹೇಳಿಕೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಸಂವಿಧಾನದ ಬಗ್ಗೆ ನೀಡುವ ವ್ಯತಿರಿಕ್ತವಾದ ಹೇಳಿಕೆಗಳಿಂದ ನಮ್ಮ ಮನಸ್ಸಿಗೆ ನೋವಾಗುತ್ತಿದೆ ಎಂದು ಮೈಸೂರಿನವರೇ ಆಗಿರುವ ಮಾಜಿ ಎಂ.ಎಲ್.ಸಿ ಗೋ ಮಧುಸೂದನ್ ನೀಡಿರುವ ಹೇಳಿಕೆಗೆ ಆಕ್ಷೇಪವ್ಯಕ್ತಪಡಿಸಿದರು.ಎರಡು ಬಾರಿ ಎಂ.ಎಲ್.ಸಿ ಆಗಿರುವ ಗೋ. ಮಧುಸೂದನ್ ಗೆ ಇನ್ನೂ ಬುದ್ಧಿ ವಿಕಾಸವಾಗಿಲ್ಲ. ಗೋ. ಮಧುಸೂದನ್ ರನ್ನು ಎಲ್ಲರೂ ಗೋ ಅನ್ನುತ್ತಾರೆ, ಕಮ್ ಅನ್ನುವುದಿಲ್ಲ. ಅನಾವಶ್ಯಕವಾಗಿ ಆತ ಸಂವಿಧಾನದ ಬಗ್ಗೆ ಮಾತನಾಡುತ್ತಾನೆ ಎಂದು ತಮ್ಮದೇ ಪಕ್ಷದ ನಾಯಕನ ವಿರುದ್ಧ ಏಕವಚನ ಪ್ರಯೋಗ ಮಾಡಿದರು. ಅಂಬೇಡ್ಕರ್ ಸಾಧಾರಣ ವ್ಯಕ್ತಿಯಲ್ಲ, ಬೆಂಕಿಯ ಜ್ವಾಲೆಗಳಿಂದ ಎದ್ದು ಬಂದವರು. ಅಂತಹವರು ಬರೆದಿರುವ ಸಂವಿಧಾನದ ಬಗ್ಗೆ ಯಾರೂ ಸಹ ಕೀಳಾಗಿ ಮಾತನಾಡಬಾರದು. ಸಂವಿಧಾನದ ಬಗ್ಗೆ ಕೀಳಾಗಿ ಮಾತನಾಡಿದ ನಂತರವೂ ಅದನ್ನು ಮತ್ತೊಮ್ಮೆ ಸಮರ್ಥಿಸಿಕೊಳ್ಳುವ ಆತನಿಗೆ ನಾಚಿಕೆಯಾಗಬೇಕು ಎಂದು ಗುಡುಗಿದರು. ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸಚಿವ ಅನಂತಕುಮಾರ್ ಹೆಗಡೆಗೆ ಸಂವಿಧಾನದ ಮಹತ್ವ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲವೇ ಎಂದು ಪ್ರಶ್ನಿಸಿದರು. ಮೈಸೂರಿನ ಈ ನಾಯಕ ಧಾರ್ಮಿಕ ಮತಾಂಧನಾಗಿದ್ದಾನೆ, ಸಚಿವ ಅನಂತಕುಮಾರ್ ಹೆಗಡೆ ಪ್ರಧಾನಿ ಮೋದಿಗೆ  ಅಪಮಾನ ಮಾಡಿದ್ದಾರೆ ಎಂದು ಹರಿಹಾಯ್ದರು. ಸಂವಿಧಾನಗ ಬಗ್ಗೆ ಹಗುರವಾದ ಹೇಳಿಕೆ ನೀಡುವವರ ವಿರುದ್ದ ಬಿಜೆಪಿ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನನಗೆ ಅಂಬೇಡ್ಕರ್ ಮುಖ್ಯವೇ ಹೊರತು ರಾಜಕೀಯ ನಾಯಕರು ಮುಖ್ಯವಲ್ಲ.ಅಂಬೇಡ್ಕರ್ ನನಗೆ ಆಧ್ಯಾತ್ಮಿಕ ನಾಯಕರಾಗಿದ್ದಾರೆ. ಆದರೆ ಬೇರೆಯವರು ಕೇವಲ ರಾಜಕೀಯ ನಾಯಕರು ಎಂದು ಪ್ರತಿಪಾದಿಸಿದರು. ಸಂವಿಧಾನ ಅಂಬೇಡ್ಕರ್ ಒಬ್ಬರೇ ಬರೆದಿದ್ದಲ್ಲ ಎಂದು ಹೇಳಿಕೆ ನೀಡಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ವಿರುದ್ಧವೂ ಟೀಕಾಪ್ರಹಾರ ನಡೆಸಿದರು. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಧರ್ಮಸಂಸದ್ ನಲ್ಲಿ ಸಂವಿಧಾನದ ಕುರಿತು ಪೇಜಾವರಶ್ರೀಗಳು ನೀಡಿರುವ ಹೇಳಿಕೆ ಖಂಡನೀಯ. ಧರ್ಮಸಂಸದ್ ನಲ್ಲಿ ಮೋಹನ್ ಭಾಗವತ್ ಒಬ್ಬರು ಮಾತ್ರ ಸರಿಯಾಗಿ ಮಾತನಾಡಿದರು ಎಂದು ಹೇಳಿದರು. ಭಾರತೀಯ ಸಂವಿಧಾನದ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು. ಮೋದಿ ಅವರೆ ಈ ದೇಶದ ಶ್ರೇಷ್ಠ ಗ್ರಂಥ ಸಂವಿಧಾನ ಎಂದು  ಒಪ್ಪಿದ್ದಾರೆ. ಐದು  ಬಾರಿ ಸಂಸದರಾದ ಅನಂತಕುಮಾರ ಹೆಗಡೆಗೆ ನಾಚಿಕೆಯಾಗಬೇಕು. ತಮ್ಮದೇ ಪಕ್ಷದ ನಾಯಕ ವಿರುದ್ಧ ಪ್ರಸಾದ್ ಗರಂ. ಇವರೆಲ್ಲರೂ ಧಾರ್ಮಿಕ ಮತಾಂಧರು. ಗೋ.ಮಧುಸೂಧನ್,  ಅನಂತ್ ಕುಮಾರ್ ಪ್ರಧಾನಿ ಮೋದಿಗೆ ಅಪಮಾನ ಮಾಡಿದ್ದಾರೆ. ನರೇಂದ್ರ ಮೋದಿ ಸಂವಿಧಾನದನ ಬಗ್ಗೆ ಹಗರುವಾಗಿ ಮಾತನಾಡುವ ಮಂದಿ ವಿರುದ್ಧ ಕ್ರಮ ಕೈಗೊಳ್ಳಲಿ. ಬಿಜೆಪಿ ಯವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಇಂಥವರ ಹೇಳಿಕೆಯಿಂದ ಜನ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.ನಮ್ಮ ಭಾವನೆಗಳನ್ನು ಕೆರಳಿಸಬೇಡಿ.ನನಗೆ ಅಂಬೇಡ್ಕರ್ ಮುಖ್ಯ ಯಾವುದೇ ರಾಜಕೀಯ ಪಕ್ಷ ಮುಖ್ಯವಲ್ಲ. ಯಾವ ಪಕ್ಷ ಆದರೂ ಅಷ್ಟೇ. ಮೋದಿ, ಅಮಿತ್ ಶಾ, ಯಡಿಯೂರಪ್ಪ ರಾಜಕೀಯ ನಾಯಕಾದರೆ ಅಂಬೇಡ್ಕರ್ ನಮ್ಮ ಆಧ್ಯಾತ್ಮಿಕ ನಾಯಕ. ನಾವೆಲ್ಲ ಈ ಮಟ್ಟಕ್ಕೆ ಬರಲು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣ.ಅಂಬೇಡ್ಕರ್ ನಮ್ಮೆಲ್ಲರ ಆಧ್ಯಾತ್ಮಿಕ ನಾಯಕ ಎಂದರು.

ಪೇಜಾವರ ಶ್ರೀ ಗಳ ಬಗ್ಗೆ ಗರಂ ಆದ ಅವರು ನೀವು ನಿಮ್ಮ ಮಠದ ಬಗ್ಗೆ ಮಾತನಾಡಿ ಅಷ್ಟೇ. ಸಂವಿಧಾನದ ಬಗ್ಗೆ ಯಾಕೆ ಮಾತನಾಡುತ್ತೀರಿ. ಈ ದೇಶದ ಚರಿತ್ರೆ ಬಗ್ಗೆ ನಿಮಗೆ ಗೊತ್ತೇ. ಧರ್ಮ ಸಂಸತ್ ನಲ್ಲಿ ನೀವು ಮಾತನಾಡಿದ್ದು ಸರಿನಾ. ಪೇಜಾವರ ಶ್ರೀ ಗಳು ಸಂವಿಧಾನದ ಬಗ್ಗೆ ಯಾಕೆ ಮಾತನಾಡುತ್ತಾರೆ ಎಂದು ಪೇಜಾವರ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನ ಇಡೀ ರಾಜಕೀಯ ಜೀವನ ಕುರಿತು ಪುಸ್ತಕ ಬರೆಯುತ್ತಿದ್ದು, ಸದ್ಯದಲ್ಲೇ ಬಿಡುಗಡೆ ಮಾಡುತ್ತೇನೆಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕರ್ನಾಟಕ ಏಕೀಕರಣದ ಬಗ್ಗೆಯೇ ಗೊತ್ತಿಲ್ಲಾ ಇದೀಗ ನವಕರ್ನಾಟಕ ನಿರ್ಮಾಣ ಯಾತ್ರೆಗೆ ಹೊರಟಿದ್ದಾರೆ. ಸಿದ್ದರಾಮಯ್ಯ ತೊಡೆ ತಟ್ಟಿಕೊಂಡು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ.ಸಿದ್ದರಾಮಯ್ಯರನ್ನು ಸೋಲಿಸುವುದೇ ನನ್ನ ಏಕೈಕ ಗುರಿ. ಮುಂದಿನ ಚುನಾವಣೆಯಲ್ಲಿ ನಾನು ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ  ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮೋಹನ್ ಕುಮಾರ್, ಸಿದ್ದರಾಜು, ಬಸವೇಗೌಡ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: