ಮನರಂಜನೆ

ನಟ ಧರ್ಮೇಂದ್ರ ಸಲ್ಮಾನ್ ಖಾನ್ ಗೆ ಹೇಳಿದ್ದೇನು ಗೊತ್ತಾ..?

ದೇಶ(ಮುಂಬೈ)ಡಿ.30;- ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ ಅವರ ಮನೆಗೆ ತೆರಳಿ ಉಭಯಕುಶಲೋಪರಿ ವಿಚಾರಿಸಿದ್ದಾರಂತೆ.

ಸಲ್ಮಾನ್ ಭೇಟಿಯಿಂದ ಅಚ್ಚರಿಗೊಂಡ ಧರ್ಮೇಂದ್ರ ನೀನ್ಯಾವತ್ತೂ ನನಗೆ ಮಗನಿದ್ದ ಹಾಗೆ ಎಂದು ಹೃದಯತುಂಬಿ ಹೇಳಿದ್ದಾರಂತೆ. ಸಲ್ಮಾನ್ ಇತ್ತೀಚೆಗೆ ತನ್ನ 52ನೇ ಜನ್ಮದಿನವನ್ನಾಚರಿಸಿಕೊಂಡರು. ಧರ್ಮೇಂದ್ರ ಈ ಹಿಂದೆ ಸಲ್ಮಾನ್ ಜೊತೆ ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ ಎಂಬ ಚಿತ್ರದಲ್ಲಿ ನಟಿಸಿದ್ದರು. ಸನ್ಮಾನ್ ನೀಡಿದ ಭೇಟಿಯಿಂದ ಅಚ್ಚರಿಗೊಂಡು ಅವರ ಜೊತೆ ಫೋಟೋ ತೆಗೆಸಿಕೊಂಡು ಅದನ್ನು ಟ್ವೀಟರ್ ಗೆ ಹಾಕಿದ್ದಾರೆ. ಧರ್ಮೇಂದ್ರ ತಮ್ಮ ಪುತ್ರ ಬಾಬ್ಬಿ ಡಿಯೋಲ್ ಚಿತ್ರ ‘ರೇಸ್ 3’ಆಕ್ಷನ್ ಥ್ರಿಲ್ಲರ್ ನಲ್ಲಿ ಸಲ್ಮಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದೇ ವೇಳೆ ಸಲ್ಮಾನ್ ಮತ್ತು ಬಾಬ್ಬಿ ಡಿಯೋಲ್ ಜೊತೆಗಿರುವ ಫೋಟೋವನ್ನೂ ಶೇರ್ ಮಾಡಿದ್ದಾರೆ. (ಎಸ್.ಎಚ್)

 

Leave a Reply

comments

Related Articles

error: