ಮೈಸೂರು

ಡಾ.ವಿಷ್ಣುವರ್ಧನ್ ಪುಣ್ಯಸ್ಮರಣೆ: ಬಡವರು, ನಿರ್ಗತಿಕರಿಗೆ ಸ್ವೆಟರ್, ಸೀರೆ ವಿತರಣೆ

ಮೈಸೂರು,ಡಿ.30-ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 8ನೇ ಪುಣ್ಯಸ್ಮರಣೆ ಅಂಗವಾಗಿ ಕರುಣಾಮಯಿ ವಿಷ್ಣುವರ್ಧನ್ ಸಂಘದ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿರುವ ವಿಷ್ಣುವರ್ಧನ್ ಉದ್ಯಾನವನದ ಮುಂಭಾಗ ಬಡವರು ಹಾಗೂ ನಿರ್ಗತಿಕರಿಗೆ ಬಿಜೆಪಿ ಮುಖಂಡ ಎಚ್.ವಿ.ರಾಜೀವ್ ಸ್ವೆಟರ್ ಮತ್ತು ಸೀರೆಯನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, ಸರ್ಕಾರ ಹಾಗೂ ನಗರಪಾಲಿಕೆ ಇಚ್ಛಾಶಕ್ತಿಯಿಂದ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸಬೇಕು. ಸಾಹಸಸಿಂಹ ವಿಷ್ಣುವರ್ಧನ್ ರವರು ಮೂಲತಃ ಮೈಸೂರಿನವರಾದರೂ ಕೂಡ ವಿಶ್ವದೆಲ್ಲಡೆ ಜನಪ್ರಿಯರಾದ್ದರು. ಕನ್ನಡ ನೆಲ, ಜಲ, ಭಾಷೆಯ ನುಡಿ ವಿಚಾರ ಬಂದಾಗ ಧ್ವನಿ ಎತ್ತುತ್ತಿದ್ದ ಮಹಾನ್ ವ್ಯಕ್ತಿ ಡಾ.ವಿಷ್ಣುವರ್ಧನ್ ರವರ  ಸಾಧನೆಯ ನೆನಪು ಕೋಟ್ಯಾಂತರ ಅಭಿಮಾನಿಗಳಲ್ಲಿ ಶಾಶ್ವತವಾಗಿ ಉಳಿದುಕೊಳ್ಳಬೇಕಾಗಿದೆ. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ವಿಷ್ಣು ಸ್ಮಾರಕ ನೆನೆಗುದಿಗೆ ಬಿದ್ದಿದ್ದು, ಈ ಕೂಡಲೇ ಜಿಲ್ಲಾಡಳಿತ ಕಾಮಗಾರಿ ಪ್ರಾರಂಭಿಸುವಲ್ಲಿ ಮುಂದಾಗಬೇಕು. ಇಲ್ಲವಾದಲ್ಲಿ ಮೈಸೂರಿಗರು, ವಿಷ್ಣು ಅಭಿಮಾನಿಗಳೇ ಸ್ವತಃ ವಿಷ್ಣು ಪ್ರತಿಮೆ ಮತ್ತು ವಿಷ್ಣು ಸ್ಮಾರಕ ಸ್ಥಾಪಿಸುವಲ್ಲಿ ಮುಂದಾಗುತ್ತೇವೆ.  ಮೈಸೂರು ಮತ್ತು ಬೆಂಗಳೂರಿನಲ್ಲಿರುವ ಸ್ಮಾರಕದ ಗೊಂದಲವನ್ನು ಕೂಡಲೇ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಕನ್ನಡ ಚಲನಚಿತ್ರರಂಗ ಮಹಾನ್ ನಟ ಅಶ್ವಥ್ ಅವರ ಮಗ ಶಂಕರ್ ಅಶ್ವಥ್ ಅವಕಾಶಗಳಿಲ್ಲದೆ, ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿ. ಕಲಾವಿದರ ಸಂಘ,  ಚಲನಚಿತ್ರ ವಾಣಿಜ್ಯ ಮಂಡಳಿ ಇವರಿಗೆ ನೆರವು ನೀಡಬೇಕು. ಇಂದಿನ ನಟರು ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಿದ್ದು, ಇವರೆಲ್ಲ ಇವರ ನೆರವಿಗೆ ಧಾವಿಸಬೇಕು ಎಂದರು.

ಈ ಸಂದರ್ಭದಲ್ಲಿ ಲಕ್ಷ್ಮೀವೇಂಕಟೇಶ್ವರ ಟ್ರಸ್ಟ್ ನ ಅಧ್ಯಕ್ಷ ಗಿರಿಧರ್, ಕರುಣಾಮಯಿ ವಿಷ್ಣುವರ್ಧನ್ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜೇಶ್, ನಿರ್ಮಾಪಕ ಪಾರ್ಥಸಾರಥಿ, ಕೆ.ಎಂ.ಪಿ.ಕೆ ಟ್ರಸ್ಟ್ ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಕಡಕೊಳ ಜಗದೀಶ್, ಸಂದೇಶ್ ಪವಾರ್, ಕಶ್ಯಪ್, ರಂಗನಾಥ್, ಎನ್.ಆರ್.ಮುಖಂಡ ರಾಜ್ ಕುಮಾರ್, ವಿಷ್ಣುವರ್ಧನ್ ಅಭಿಮಾನಿಗಳು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: