ಮೈಸೂರು

ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಕ್ರೀಡೆ ಆಯೋಜನೆ: ಶಿವಶಂಕರ್

ಮೈಸೂರು,ಡಿ.30: – ಜಿಲ್ಲಾ ಪಂಚಾಯತ್  ಸದಸ್ಯರು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳ ನಡುವಿನ ಸ್ನೇಹಯುತ ಕ್ರೀಡಾಕೂಟಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹ್ಮದ್  ಹಾಗೂ  ಸಿಇಓ ಶಿವಶಂಕರ್  ವಾಲಿಬಾಲ್ ಆಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಒಂದು ಕಡೆಯ ಟೀಮ್‍ನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬೀರಿಹುಂಡಿ ಬಸವಣ್ಣ ಮತ್ತವರ ತಂಡ ಇನ್ನೊಂದೆಡೆ ಜಿಲ್ಲಾ ಪಂಚಾಯತ್ ಅಧಿಕಾರಿಗಳ ತಂಡ ಆಟವಾಡಲು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಈ ವೇಳೆ ಉಪಸ್ಥಿತರಿದ್ದ ಸಿಇಓ ಶಿವಶಂಕರ್ ಮಾತನಾಡಿ 23 ಇಲಾಖೆಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿದ್ದು, ವರ್ಷಪೂರ್ತಿ ಕೆಲಸದ ಒತ್ತಡದಲ್ಲಿರುವ ಅಧಿಕಾರಿಗಳಿಗೆ ಇಂತಹ ಕ್ರೀಡೆ ಉತ್ಸಾಹ ತುಂಬಲಿದೆ ಎಂದರು.

ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಈ ಕ್ರೀಡೆ ನಡೆಸಲಾಗುತ್ತಿದ್ದು, ಕ್ರೀಡೆಯನ್ನು ಮನರಂಜನಾತ್ಮಕವಾಗಿ ಪರಿಗಣಿಸಿ ಎಂದರು. ಅಲ್ಲದೆ, ಪ್ರತಿ ವರ್ಷವೂ ಸಹ ಕ್ರೀಡೆ ಆಯೋಜಿಸುವ ಮೂಲಕ ಅಧಿಕಾರಿಗಳನ್ನು ಕ್ರೀಡೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: