ಸುದ್ದಿ ಸಂಕ್ಷಿಪ್ತ

ಸಹಕಾರಿ ನಿಯಮಿತದ ಚಿಂತನ ಸಭೆ

ದೇಶದ ಹಿತಾದೃಷ್ಟಿಯಿಂದ ಪ್ರಧಾನಮಂತ್ರಿಗಳು 500 ಹಾಗೂ 1000 ನೋಟಗಳನ್ನು ನಿಷೇಧಿಸಿರುವ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ ಬೆಂಬಲ ಸೂಚಿಸಿದೆ. ಈ ಬಗ್ಗೆ ಕಳೆದ ನ.16ರಂದು ಬೆಂಗಳೂರಿನ ಪದ್ಮನಾಭನಗರದಲ್ಲಿ ಪ್ರಾದೇಶಿಕ ಆಡಳಿತ ಸಹಕಾರ ನಿರ್ವಹಣಾ ಸಂಸ್ಥೆ  ತುರ್ತು ಸಭೆ ನಡೆಸಿ ನೋಟಿನ ವಿನಿಮಯ ಪ್ರಕ್ರಿಯೆಯಲ್ಲಿ ಸಂಸ್ಥೆಗಳನ್ನು ದೂರವಿಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಕನಿಷ್ಟ ಒಂದು ಲಕ್ಷ ರೂಪಾಯಿ ಖಾತೆಯಿಂದ ಹಣ ಪಡೆಯುವ ಮಿತಿ ಮಾಡಬೇಕು ಹಾಗೂ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು. ಸಭೆಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಉಪಾಧ್ಯಕ್ಷ ಹೆಚ್.ವಿ.ರಾಜೀವ್, ನಿರ್ದೇಶಕರಾದ ಬಿ.ಹೆಚ್.ಕೃಷ್ಟಾರೆಡ್ಡಿ, ಬಾಸ್ಕರ ಹೆಗಡೆ, ಎಂ.ಬಿ.ಕಲಾಲ್, ವೈ.ಟಿ.ಪಾಟೀಲ್.ಕೆ.ಸಣ್ಣಸೂಗಪ್ಪ, ಬಾಸ್ಕರ ಕಾಮತ್, ಆಂಜನೇಯ ಗುಪ್ತ ಹಾಗೂ ರಾಜ್ಯದ 215 ಸೌಹಾರ್ದ ಸಹಕಾರಿ ಸಂಸ್ಥೆಗಳ 315 ಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

comments

Related Articles

error: