ಮೈಸೂರು

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಕೆಲಸವನ್ನು ಮಾಡಿ : ಕೋಟೆ ಎಂ. ಶಿವಣ್ಣ ಸಲಹೆ

ಮೈಸೂರು, ಡಿ.30:-ನಂಜನಗೂಡಿನ ಅಶೋಕಪುರಂ ಬಡಾವಣೆಯ ಯುವಕರು ಹಾಗೂ ಡಾ, ವಿಷ್ಣುವರ್ಧನ್ ಅಭಿಮಾನಿಗಳು ಸೇರಿ ಸ್ಥಾಪಿಸಿದ ಸ್ನೇಹಲೋಕ ಕನ್ನಡ ಸೇನೆ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಉದ್ಘಾಟಿಸಿದರು.

ನಗರದ ಊಟಿ ರಸ್ತೆಯಲ್ಲಿರುವ ಯಾತ್ರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ವಾರ್ಚನೆ ಮಾಡಿ ಮಾತನಾಡಿದ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಕೆಲಸವನ್ನು ಮಾಡಿ, ರಕ್ತದಾನ, ಬಡವರ ಕೆಲಸ, ಮಾಡಿಕೊಡಿ, ನಾನು ರಾಜಕೀಯದಲ್ಲಿ ಏನಾದರೂ ಸಾಧಿಸಿದ್ದರೆ ಅದು ಯುವಕನಿದ್ದಾಗ ಇಂತಹ ಸಂಘವನ್ನು ಸ್ಥಾಪಿಸಿ ಮಾತ್ರ. ರಾಜಕೀಯ ನಾಯಕರ ಗಮನ ಸೆಳೆದು ಧ್ವನಿಯಿಲ್ಲದವರ ಕೆಲಸಮಾಡಿಕೊಡುತ್ತಿದ್ದೆ. ನೀವು ಸಹ ಈ ಸಂಘವನ್ನು ಕೇವಲ ಸ್ಥಾಪಿಸಿ ಕೈ ಬಿಡಬೇಡಿ, ಡಾ.ವಿಷ್ಣುವರ್ಧನ್‍ರವರು ನನ್ನ ಆತ್ಮೀಯ ಸ್ನೇಹಿತರಾಗಿದ್ದರು, ಅವರ ನೆನಪಿಗೆ ಈ ಸಂಘವನ್ನು ಸ್ಥಾಪಿಸಿದ್ದೀರಿ, ನಿಮ್ಮ ಸಾಧನೆ ಗುರಿ, ಉತ್ತಮವಾಗಿರಲಿ ಎಂದರು.

ಶಾಸಕ ಕಳಲೆ ಎನ್.ಕೇಶವಮೂರ್ತಿ ಮಾತನಾಡಿ, ನಿಮ್ಮ ಬಡಾವಣೆ ಅಭಿವೃದ್ದಿಗೆ ನಮ್ಮ ಸರ್ಕಾರದಿಂದ ಸಾಕಷ್ಟು ಕೆಲಸವನ್ನು ಮಾಡುತ್ತಿದ್ದೇವೆ. ವಸತಿಯಿಲ್ಲದವರಿಗೆ ಅರ್ಜಿಯನ್ನು ನೀಡಿ ಅರ್ಹರಿಗೆ ಮನೆ ನೀಡಲು ಬದ್ಧನಾಗಿರುವುದಾಗಿ ತಿಳಿಸಿದರು. ಸಮಾಜ ಸೇವಕ ಹಾಗೂ ಜೆಡಿಎಸ್ ಮುಖಂಡ ಎಸ್. ಶಂಕರ್ ಮಾತನಾಡಿ, ನಾಡು,ನುಡಿ, ಜಲ ಉಳಿಸಿಕೊಳ್ಳುವುದು. ನಮ್ಮ ಆದ್ಯ ಕರ್ತವ್ಯವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತೀರುವುದು ವಿಷಾದನೀಯ ಬೇರೆ ರಾಜ್ಯಗಳಿಂದ ಕರ್ನಾಟಕದಲ್ಲಿ ನೆಲೆಸುವವರು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಯಬೇಕು. ಡಾ, ವಿಷ್ಣುವರ್ಧನ್ ಡಾ.ರಾಜ್‍ಕುಮಾರ್ ಚಿತ್ರರಂಗ ಕಂಡ ಅಪರೂಪದ ರತ್ನಗಳು ಎಂದ ಅವರು ಸಮುದಾಯ ಬೇಡಿಕೆಯನ್ನು ಬಗೆಹರಿಸುವಂತೆ ಶಾಸಕರಿಗೆ ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ವಿ.ಮಹದೇವಸ್ವಾಮಿ, ನಗರಸಭಾ ಸದಸ್ಯ ಸುಂದರ್‍ರಾಜು, ಸಂಘದ ಅಧ್ಯಕ್ಷ ಜಿ.ನಾರಾಯಣ್‍ಸ್ವಾಮಿ, ಗೌರವ ಅಧ್ಯಕ್ಷ ದೇವರಾಜು, ಮಾಜಿ ಪುರಸಭಾ ಉಪಾಧ್ಯಕ್ಷ ಎನ್.ಇಂದ್ರ, ಸದಸ್ಯ ರಾಜೇಶ್, ಮಾಜಿ ಧರ್ಮದರ್ಶಿ ಆರೋರಪ್ಪ, ಆದಿ ಜಾಂಬವ ಸಂಘದ ಅಧ್ಯಕ್ಷ ಸಿ. ಬಸವರಾಜು, ಅಶೋಕಪುರಂ ಸ್ವಾಮಿ, ಸಿದ್ದರಾಜು, ದೇಬೂರು ಶಿವಕುಮಾರ್, ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: