ಮೈಸೂರು

ಅರಮನೆ ಅವರಣದಲ್ಲಿ ಸ್ವಚ್ಛತಾ ಅಭಿಯಾನ

ಮೈಸೂರು,ಡಿ.31:- ಭಾನುವಾರ ಅರಮನೆ ಅವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಸ್ವಚ್ಛತಾ ಅಭಿಯಾನ ಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಈ ಬಾರಿ ಸ್ವಚ್ಛ ನಗರಿ ಮೊದಲ ಸ್ಥಾನದ ನಿರೀಕ್ಷೆ ಇದೆ. ಈ ಕಾರ್ಯಕ್ಕೆ ಜನರ ಸಹಕಾರ ಅಗತ್ಯ. ಅರಮನೆ ಆವರಣದಲ್ಲಿ ವೇಸ್ಟ್ ಮೆನೇಜ್ಮೆಂಟ್ ಘಟಕ ಸ್ಥಾಪನೆ ಮಾಡಬೇಕು ಎಂದರಲ್ಲದೇ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದರು. ಇದೇ ವೇಳೆ ಜಿಲ್ಲಾಧಿಕಾರಿ ಡಿ. ರಂದೀಪ್ ಖುದ್ದು ಪೊರಕೆ ಹಿಡಿದು ಸ್ವಚ್ಛತೆಯಲ್ಲಿ ತೊಡಗಿದರು. ಹಲವು ಗಣ್ಯರು ಅವರಿಗೆ ಸಾಥ್ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: