ಪ್ರಮುಖ ಸುದ್ದಿಮೈಸೂರು

ಪೊಲೀಸರ ವಿನೂತನ ಕಾರ್ಯಕ್ರಮದಿಂದ ಅಪರಾಧ ಸಂಖ್ಯೆಯಲ್ಲಿ 15% ಇಳಿಮುಖ ,8.5 ಕೋಟಿ ದಂಡ ಸಂಗ್ರಹ : ಡಾ.ಎ.ಸುಬ್ರಹ್ಮಣ್ಯೇಶ್ವರರಾವ್

ಮೈಸೂರು,ಜ.1:- 2017 ರಲ್ಲಿ ಮೈಸೂರು ನಗರ ಪೊಲೀಸರ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಒಟ್ಟು ಅಪರಾಧ ಸಂಖ್ಯೆಯಲ್ಲಿ 15% ಇಳಿಮುಖವಾಗಿದೆ. 2 ಕೋಟಿ ಮೌಲ್ಯದ ಸ್ವತ್ತುಗಳ ವಶ ಪಡಿಸಿಕೊಳ್ಳಲಾಗಿದೆ. ಸಂಚಾರ ಪೊಲೀಸರಿಂದ 8.5 ಕೋಟಿ ದಂಡ ಸಂಗ್ರಹವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

2017ನೇ ವರ್ಷದಲ್ಲಿ ಮೈಸೂರು ನಗರ ಪೊಲೀಸರು ಅಪರಾಧ ತಡೆ ಮತ್ತು ಪತ್ತೆಗಾಗಿ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ 2016ನೇ ಸಾಲಿಗಿಂತ 2017ನೇ ಸಾಲಿನಲ್ಲಿ ಅಪರಾಧಗಳ ಸಂಖ್ಯೆಯಲ್ಲಿ ಇಳಿಮುಖ ತರುವಲ್ಲಿ ಮತ್ತು ಹೆಚ್ಚು ಜನಸ್ನೇಹಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ.

ನ್ಯೂ ಬೀಟ್ ಸಿಸ್ಟಂ, ಕಟ್ಟುನಿಟ್ಟಿನ ರಾತ್ರಿ ಗಸ್ತು ವ್ಯವಸ್ಥೆ, ದಿನದ 24 ಗಂಟೆಗಳ ಗಸ್ತಿಗಾಗಿ ಗರುಡ, ಚೀತಾ , ಕೋಬ್ರ, ವನಿತಾ ಸಹಾಯವಾಣಿ, ಇಂಟರ್ ಸೆಪ್ಟರ್ ವಾಹನಗಳ ನಿಯೋಜನೆ, ಗುಡ್ ಮಾರ್ನಿಂಗ್ ಬೀಟ್, ಅಪರೇಷನ್ ಚೀತಾ, ಅ್ಯಂಟಿ ರೌಡಿ ಸ್ಕ್ವಾಡ್, ಭದ್ರತಾ ಪ್ರಕರಣಗಳ ಹೂಡಿಕೆ, ಅನಿರೀಕ್ಷಿತ ರೌಡಿ ಮತ್ತು ಎಂ.ಓ.ಬಿ. ಪೆರೇಡ್ ಮುಂತಾದ ಕ್ರಮಗಳ ಮೂಲಕ ನಗರದಲ್ಲಿ 2016ನೇ ಸಾಲಿಗಿಂತ 2017ರಲ್ಲಿ ಒಟ್ಟು 15 % ಅಪರಾಧ ಪ್ರಕರಣಗಳನ್ನು ಇಳಿಮುಖಗೊಳಿಸಿದ್ದು, ಸ್ವತ್ತು ಕಳುವು ಪ್ರಕರಣಗಳಲ್ಲಿ 2 ಕೋಟಿ ರೂ ಮೌಲ್ಯದ ಸ್ವತ್ತನ್ನು ಪತ್ತೆ ಹಚ್ಚಲಾಗಿದೆ.

ಆ್ಯಂಟಿ ರೌಡಿ ಸ್ಕ್ವಾಡ್ ತೆರೆಯುವ ಮೂಲಕ ರೌಡಿಗಳ ಮೇಲೆ ವಿಶೇಷ ನಿಗಾ ವಹಿಸಿ ಆಗಾಗ್ಗೆ ಅನಿರೀಕ್ಷಿತ ರೌಡಿ ಪೆರೇಡ್‍ಗಳನ್ನು ಮಾಡಿ ಇವರುಗಳ ಮೇಲೆ ಹೆಚ್ಚು ಭದ್ರತಾ ಪ್ರಕರಣಗಳನ್ನು ದಾಖಲಿಸಿ ಇವರ ಎಲ್ಲಾ ಅಕ್ರಮಗಳಿಗೆ ಕಡಿವಾಣ ಹಾಕುವ ಮೂಲಕ ನಗರದಲ್ಲಿ ದೊಂಬಿ, ಹಲ್ಲೆಯಂತಹ ಪ್ರಕರಣಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ 10% ಪ್ರಕರಣಗಳನ್ನು ಇಳಿಮುಖಗೊಳಿಸಲಾಗಿದೆ. ಹಾಗೆಯೇ ಈ ವರ್ಷದಲ್ಲಿ ರೌಡಿ ಆಸಾಮಿಗಳಿಂದ ಯಾವುದೇ ಗುರುತರ ಅಪರಾಧಗಳು ಘಟಿಸದಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮೈಸೂರು ನಗರದಲ್ಲಿ ಗುಡ್ ಮಾರ್ನಿಂಗ್ ಬೀಟ್, ಗುಡ್ ಇವಿನಿಂಗ್ ಬೀಟ್, ಅಪರೇಷನ್ ಫಾಸ್ಟ್ ಟ್ರಾಕ್, 24*7 ಪೊಲೀಸ್ ವಾಹನಗಳ ಗಸ್ತು ವ್ಯವಸ್ಥೆ, ಅನಿರೀಕ್ಷಿತ ಎಂ.ಓ.ಬಿ. (ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವರು) ಪೆರೇಡ್‍ಗಳನ್ನು ಮಾಡಿರುವುದರಿಂದ 2016ನೇ ಸಾಲಿಗಿಂತ 2017ನೇ ಸಾಲಿನಲ್ಲಿ ಸರಗಳ್ಳತನ ಪ್ರಕರಣಗಳಲ್ಲಿ 53% ರಷ್ಟು ಪ್ರಕರಣಗಳು ಇಳಿಮುಖವಾಗಿವೆ. ಅಪರಾಧ ನಿಯಂತ್ರಣಕ್ಕಾಗಿ ರೌಡಿ ಆಸಾಮಿಗಳು, ಎಂ.ಓ.ಬಿ. ಆಸಾಮಿಗಳು ಮತ್ತು ಇತರೇ ಸಮಾಜಘಾತಕ ವ್ಯಕ್ತಿಗಳ ವಿರುದ್ಧ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತಾ ಪ್ರಕರಣಗಳನ್ನು ಇಲಾಖೆಯಿಂದ ಹೂಡಲಾಗುತ್ತದೆ. ಕಳೆದ ಸಾಲಿಗಿಂತ ಈ ಬಾರಿ ಇಂತಹ ಪ್ರಕರಣಗಳನ್ನು 45% ರಷ್ಟು ಹೆಚ್ಚು ಹೂಡಲಾಗಿದೆ. ಸಂಚಾರ ಅರಿವು ಮತ್ತು ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಆಪರೇಷನ್ ಚೀತಾ ಮೂಲಕ ಅಪಘಾತಗಳ ಪ್ರಮಾಣ ಇಳಿಮುಖಗೊಳಿಸಲು ಯಶಸ್ವಿಯಾಗಿದ್ದು, ಕಳೆದ ಸಾಲಿಗಿಂತ ಈ ವರ್ಷ ಅಪಘಾತದಲ್ಲಿ 4 ಸಂಖ್ಯೆಯ ಮರಣ ಕಡಿಮೆಯಾಗಿರುತ್ತದೆ. ಅದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 2017ನೇ ಸಾಲಿನಲ್ಲಿ 8 . 5 ಕೋಟಿ ರೂ ದಂಡ ಸಂಗ್ರಹಿಸಿದ್ದು, 2016ನೇ ಸಾಲಿಗಿಂತ ರೂ. 1 . 2 ಕೋಟಿಗಳಷ್ಟು ಹೆಚ್ಚಿನ ದಂಡ ಸಂಗ್ರಹಿಸಲಾಗಿದೆ.

ಮೈಸೂರು ನಗರ ಪೊಲೀಸ್ ವತಿಯಿಂದ 2017ನೇ ಸಾಲಿನಲ್ಲಿ ಆಂಟಿ ರೌಡಿ ಸ್ಕ್ವಾಡ್ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ವಿನೂತನವಾಗಿ ರಚಿಸಲಾಗಿದೆ. ಅನಿರೀಕ್ಷಿತ ರೌಡಿ ಮತ್ತು ಎಂ.ಓ.ಬಿ. ಪೆರೇಡ್, ಅಪರಾಧಗಳ ತಡೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರತಿ ಮೂರು ತಿಂಗಳಿಗೊಮ್ಮೆ ಅನಿರೀಕ್ಷಿತ ರೌಡಿ ಮತ್ತು ಎಂ.ಓ.ಬಿ. ಪೆರೇಡ್ ನಡೆಸಲಾಗುತ್ತಿದೆ. ನ್ಯೂ ಬೀಟ್ ಸಿಸ್ಟಂ ಸಮಾನ ಜವಾಬ್ದಾರಿ ಮತ್ತು ಸಮಾನ ಅಧಿಕಾರವನ್ನು ಎಲ್ಲಾ ಪೊಲೀಸ್ ಸಿಬ್ಬಂದಿಯವರಿಗೆ ನೀಡುವ ಮೂಲಕ ಪ್ರದೇಶಕ್ಕೊಬ್ಬ ಪೊಲೀಸ್ ಧ್ಯೇಯದಡಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ಸ್ಥಾಪಿಸಲಾಗಿದೆ. ಸಂಚಾರ ಸಲಹಾ ಸಮಿತಿ ಮೈಸೂರು ನಗರದ ಸಂಚಾರ ಅಭಿವೃದ್ದಿಗಾಗಿ ಸಂಚಾರ ಅದಾಲತ್ ನಡೆಸುವ ಉದ್ದೇಶದಿಂದ ಈ ಸಮಿತಿ ರಚಿಸಲಾಗಿದೆ. ಆಪರೇಷನ್ ಚೀತಾ ಸಂಚಾರ ನಿಯಮಗಳ ಜಾರಿಗಾಗಿ ,ರಾತ್ರಿ ಗಸ್ತು ವ್ಯವಸ್ಥೆಯ ಅತ್ಯುತ್ತಮ ಸುಧಾರಣೆ, ಹೆಚ್ಚಿನ ಸಂಖ್ಯೆಯಲ್ಲಿ ಡಯಲ್ 100 ಸ್ಥಾಪನೆ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಅಪರಾಧ ತಡೆ ಮಾಸ ಆಚರಣೆ ಈ ವಿನೂತನ ಕಾರ್ಯಕ್ರಮಗಳೊಂದಿಗೆ ಜನವರಿ ಮಾಹೆಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಡಿಸೆಂಬರ್ ಮಾಹೆಯಲ್ಲಿ ಅಪರಾಧ ತಡೆ ಮಾಸಾಚರಣೆ, ಆಪರೇಷನ್ ಡಿಫಾರ್ ಅಕ್ರಮವಾಗಿ ನಗರದಲ್ಲಿ ವಾಸವಾಗಿದ್ದ ವಿದೇಶಿಯರನ್ನು ಪತ್ತೆ ಮಾಡಿ ಅವರ ವಿರುದ್ದ ಕ್ರಮ ಕೈಗೊಳ್ಳಲು ಮತ್ತು ವಿದೇಶಿಗರಿಗೆ ಸಂಬಂಧಿಸಿದಂತೆ ಅವರು ವಿದ್ಯಾಭ್ಯಾಸ ಮಾಡುವ ಮತ್ತು ವಾಸಿಸುವ ಸ್ಥಳಗಳಲ್ಲಿ ಆ ಸಂಸ್ಥೆಗಳ ಮತ್ತು ಮಾಲೀಕರ ಜವಾಬ್ದಾರಿ ಕುರಿತ ಕಾರ್ಯಕ್ರಮಗಳ ಆಯೋಜನೆಗಾಗಿ ಮಾಡಲಾಗಿದೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗಾಗಿ ಕಲ್ಯಾಣ ಕಾರ್ಯಗಳು 2018ನೇ ಸಾಲಿನಲ್ಲಿ ಈ ಎಲ್ಲಾ ವ್ಯವಸ್ಥೆಗಳನ್ನು ಮುಂದುವರೆಸಿಕೊಂಡು ಹೋಗುವುದರೊಂದಿಗೆ ಇತರೇ ವಿನೂತನ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಮೈಸೂರು ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು , ಅಪರಾಧಗಳ ಸಂಖ್ಯೆಯನ್ನು ಇಳಿಮುಖಗೊಳಿಸಲು ಸುಗಮ ಸಂಚಾರ ವ್ಯವಸ್ಥೆಯನ್ನು ವೃದ್ದಿಸಲು ಮತ್ತು ಇನ್ನೂ ಹೆಚ್ಚು ಜನಸ್ನೇಹಿಯಾಗಲು ಪ್ರಯತ್ನಿಸಲಾಗುವುದೆಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: