ಪ್ರಮುಖ ಸುದ್ದಿಮೈಸೂರು

ದೆಹಲಿಯ ರಾಷ್ಟ್ರೀಯ ವಾಹಿನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೈಸೂರು ಮೂಲದ ಪತ್ರಕರ್ತ ಹೃದಯಾಘಾತದಿಂದ ಸಾವು

ಮೈಸೂರು,ಜ.1:- ದೆಹಲಿಯಲ್ಲಿ ರಾಷ್ಟ್ರೀಯ ವಾಹಿನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೈಸೂರು ಮೂಲದ ಹಿರಿಯ ಪತ್ರಕರ್ತ ಅನೂಪ್ ಕುಮಾರ್ (50) ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಅನೂಪ್ ಕುಮಾರ್ ಹೃದಯಾಘಾದಿಂದ ಮೃತಪಟ್ಟಿದ್ದು, ನಿನ್ನೆ ಕುಟುಂಬ ಸಮೇತ ಮನಾಲಿಗೆ ತೆರಳಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ಸದ್ಯ ಮನಾಲಿ ಸರ್ಕಾರಿ ಆಸ್ಪತ್ರೆಯಲ್ಲಿರುವ ಮೃತದೇಹವನ್ನಿರಿಸಲಾಗಿದ್ದು, ಸಂಜೆ ವೇಳೆಗೆ ಮೈಸೂರು ತಲುಪಲಿದೆ. ಮನಾಲಿಯಿಂದ ಚಂಢೀಗರ್ ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ತಲುಪಲಿದ್ದು, ಮೈಸೂರಿನ ವಿಜಯನಗರದ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನ ಗೋಕುಲಂ ಬಡಾವಣೆಯ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅನೂಪ್ ಕುಮಾರ್ ಕುಟುಂಬದವರು ಮಾಹಿತಿ ನೀಡಿದ್ದಾರೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: