ದೇಶಮೈಸೂರುವಿದೇಶ

“ಇನ್‍ಕ್ಲೂಸಿವ್‍ ಎಕನಾಮಿಕ್ ಗ್ರೋಥ್‍” ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ

ಶ್ರೀ ಧರ್ಮಸ್ಥಳ ಮಂಜುನಾಥೇಶ‍್ವರ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್‍ ಡೆವೆಲಪ್‍ಮೆಂಟ್‍ (ಎಸ್‍ಡಿಎಮ್‍ಐಎಮ್‍ಡಿ) ಮೈಸೂರು ವತಿಯಿಂದ ‘ಇನ್ಕ್ಲೂಸಿವ್‍ ಎಕನಾಮಿಕ್ ಗ್ರೋಥ್‍’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ನ.18 ಮತ್ತು 19ರಂದು ಆಯೋಜಿಸಲಾಗಿದೆ.

ಕ್ಯಾನ್‍ಬೆರಾದಲ್ಲಿರುವ ಆಸ್ಟ್ರೇಲಿಯನ್‍ ನ್ಯಾನಷನಲ್ ಯೂನಿವರ್ಸಿಟಿಯ ಅರ್ಥಶಾಸ್ತ್ರ ಪ್ರೊಫೆಸರ್‍ ಮತ್ತು ಭಾರತ ಸರ್ಕಾರಕ್ಕೆ ಅರ್ಥಶಾಸ್ತ್ರೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿರುವ ಡಾಕ್ಟರ್‍ ಕಲಿಯಪ್ಪ ಕಲಿರಾಜನ್ ಅವರು ಸಮ್ಮೇಳನವನ್ನು ನ.18 ರ ಬೆಳಗ್ಗೆ 9.45ಕ್ಕೆ ಉದ್ಘಾಟಿಸಿ ಆಶಯ ಭಾಷಣ ಮಾಡಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಸಿಸ್‍ಇನ್ಫರ್ಮೇಷನ್‍ ಅಧ್ಯಕ್ಷ ಹಿರಿಯ ಉಪಾಧ್ಯಕ್ಷ ಅಶೋಕ್ ಬಲರಾಮ್, ಬ್ರಿಲ್ಲಿಯೊ ಟೆಕ್ನಾಲಜಿ ಲಿ. ಸಿಎಸ್‍ಆರ್ ಅಂಡ್ ಸಸ್ಟೈನಬಿಲಿಟಿ ಮುಖ್ಯಸ್ಥ ಅಭಿಷೇಕ್ ರಂಜನ್ ಅವರುಗಳು ಆಹ್ವಾನಿತ ಉಪನ್ಯಾಸ ನೀಡಲಿದ್ದಾರೆ.

ನವೆಂಬರ್ 19 ರಂದು ನೈಜೀರಿಯಾದ ಬೇಜ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರೊಫೆಸರ್ ಸ್ಟಿಫನ್ ಅರೊ-ಗೋರ್ಡನ್, ಬೆಂಗಳೂರಿನ ನ್ಯಾಷನಲ್ ಸೆಂಟರ್‍ ಫಾರ್ ಎಕ್ಸಲೆನ್ಸ್ ನ ರಾಷ್ಟ್ರೀಯ ನಿರ್ದೇಶಕ ಕೆ.ಎನ್. ಜನಾರ್ದನ ಅವರು ಉಪನ್ಯಾಸ ನೀಡಲಿದ್ದಾರೆ.

ಸಂಜೆ 4 ಗಂಟೆಗೆ ಆರಂಭವಾಗುವ ಸಮಾರೋಪ ಸಮಾರಂಭದಲ್ಲಿ ನ್ಯೂಜಿ಼ಲಂಡ್‍ನ ವೈಕಟೊ ಸ್ಕೂಲ್ ಆಫ್ ಬಿಸಿನೆಸ್‍ನ ಅರ್ಥಶಾಸ್ತ್ರೀಯ ಪ್ರೊಫೆಸರ್ ಡಾ|| ಸ್ಟುವರ್ಟ್‍ ಲೊಕೆ ಅವರು ಮಾತನಾಡಲಿದ್ದಾರೆ.

ಕಾರ್ಪೊರೇಟ್ ವಲಯದ ಪ್ರತಿನಿಧಿಗಳು, ಬೋಧಕ ಸಿಬ್ಬಂದಿ ಮತ್ತು ಸಂಶೋಧಕ ವಿದ್ಯಾರ್ಥಿಗಳು, ಭಾರತ, ಆಸ್ಟ್ರೇಲಿಯ, ನೈಜೀರಿಯ, ನ್ಯೂಜಿ಼ಲ್ಯಾಂಡ್‍, ಬಾಂಗ್ಲಾದೇಶ, ಫಿಜಿ, ಇರಾನ್‍ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ವೃತ್ತಿಪರರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

Leave a Reply

comments

Related Articles

error: