ಮೈಸೂರು

ವರ್ಷದ ಮೊದಲ ದಿನವೇ ಸರಣಿ ಅಪಘಾತ : ದೈಹಿಕ ಶಿಕ್ಷಕ ಸಾವು

ಮೈಸೂರು,ಜ.1:- ಹೊಸ ವರ್ಷದ ಮೊದಲ ದಿನವೇ ಮೈಸೂರಿನಲ್ಲಿ ದುರಂತ ಸಂಭವಿಸಿದೆ. ಹೊಸವರ್ಷದಲ್ಲಿ ಹೊಸ ಹೊಸ ಯೋಜನೆಗಳ ಕನಸು ಕಟ್ಟಿದ್ದ, ಮೊದಲ ದಿನದ ಶುಭಾಶಯವನ್ನು ತನ್ನ ನೆಚ್ಚಿನ ವಿದ್ಯಾರ್ಥಿಗಳಿಗೆ ತಿಳಿಸಲು ಬೈಕ್ ನಲ್ಲಿ  ಹೊರಟ ದೈಹಿಕ ಶಿಕ್ಷಕರೋರ್ವರು ಮೈಸೂರು ಹುಣಸೂರು ರಸ್ತೆಯ ಬನ್ನಿ ಕುಪ್ಪೆ ಗೇಟ್ ಬಳಿ ನಡೆದ ಸರಣಿ ಅಪಘಾತದಲ್ಲಿ ಭೀಕರವಾಗಿ ಸಾವನ್ನಪ್ಪಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಗೇಟ್ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಬೈಕ್ ಸವಾರ ಹುಣಸೂರು ತಾಲೂಕಿನ ಹಿರೇಕ್ಯಾತನಹಳ್ಳಿಯ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದ ಮಹೇಶ್(36)ಎಂಬವರು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಇವರು ಮೈಸೂರಿನಿಂದ ಶಾಲೆಗೆ ತೆರಳಿದ್ದರು. ಈ ಸಂದರ್ಭ ಎರಡು ಕಾರು ಮತ್ತು ಬೈಕ್ ನಡುವೆ  ಭೀಕರ ಅಪಘಾತ ಸಂಭವಿಸಿದೆ. ಒಂದು ಕಾರು ಮೋರಿಗೆ ಉರುಳಿ ಬಿದ್ದಿದ್ದು ಮತ್ತೊಂದು ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: