ಮೈಸೂರು

40 ಕುಟುಂಬಗಳಿಗೆ ಗೃಹಪಯೋಗಿ ಸೋಲಾರ್ ಎಮರ್ಜೆನ್ಸಿ ಲೈಟ್ ಮತ್ತು ಆಯುರ್ವೇದ ಸಸಿ ವಿತರಣೆ

ಮೈಸೂರು,ಜ.1-ಹೊಸ ವರ್ಷದ ಅಂಗವಾಗಿ ಬೆಳಕು ಸಂಸ್ಥೆಯ ವತಿಯಿಂದ ನಗರದ 1ನೇ ವಾರ್ಡ್ ನ ಆಯ್ದ 40 ಹಿಂದುಳಿದ ಕುಟುಂಬಗಳಿಗೆ ಉಚಿತವಾಗಿ ಗೃಹಪಯೋಗಿ ಸೋಲಾರ್ ಎಮರ್ಜೆನ್ಸಿ ಲೈಟ್ ಮತ್ತು ಆಯುರ್ವೇದ ಸಸಿಗಳನ್ನು ವಿತರಿಸಿ ಹೊಸ ವರ್ಷ ಎಲ್ಲರ ಬಾಳಲ್ಲಿ ಬೆಳಕನ್ನು ತರಲಿ ಎಂದು ಶುಭಹಾರೈಸಿದರು.

ಬಿಜೆಪಿ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸದಸ್ಯ ಟಿ.ಎಸ್.ಶ್ರೀವತ್ಸ ಹಾಗೂ ಬೆಳಕು ಸಂಸ್ಥೆಯ ಸಂಚಾಲಕ ಕೆ.ಎಂ.ನಿಶಾಂತ್ ಗೃಹಪಯೋಗಿ ಸೋಲಾರ್ ಎಮರ್ಜೆನ್ಸಿ ಲೈಟ್ ಮತ್ತು ಆಯುರ್ವೇದ ಸಸಿಗಳನ್ನು ವಿತರಿಸಿದರು.

ನಂತರ ಮಾತನಾಡಿದ ಟಿ.ಎಸ್.ಶ್ರೀವತ್ಸ, ಬೆಳಕು ಅಂದರೆ ಜ್ಞಾನ. ಬೆಳಕು ಅಂದರೆ ಚೈತನ್ಯ, ಉತ್ಸಾಹ, ನೆಮ್ಮದಿ, ಹೊಸ ಹೊಸ ಚಿಂತನೆಗಳಿಗೆ ಶಕ್ತಿ. ಬಡವ-ಶ್ರೀಮಂತನೆನ್ನುವ ಭೇದ-ಭಾವವಿಲ್ಲದೆ ಸಮಾನತೆಯನ್ನು ಸಾರುವ ಈ ಬೆಳಕು 2018ರಂದು ಎಲ್ಲರ ಮನೆ-ಮನಗಳಲ್ಲಿ ಬೆಳಗಲಿ ಎಂಬ ಉದ್ದೇಶದಿಂದ 40 ಕುಟುಂಬಗಳಿಗೆ ಉಚಿತವಾಗಿ ಗೃಹಪಯೋಗಿ ಸೋಲಾರ್ ಎಮರ್ಜೆನ್ಸಿ ಲೈಟ್ ಮತ್ತು ಆಯುರ್ವೇದ ಸಸಿಗಳನ್ನು ವಿತರಿಸಿದೆವು ಎಂದರು.

ಕಾರ್ಯಕ್ರಮದಲ್ಲಿ ಪ್ರದೀಪ್ ಕುಮಾರ್, ಧನುಷ್, ಮಧು, ಅರುಣ್, ಪ್ರವೀಣ್, ಅಕ್ಷಯ್, ಸುಭಾಷ್, ದೀಪಕ್, ಸಂತೋಷ್, ಸುಮುಖ್ ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

 

Leave a Reply

comments

Related Articles

error: