ಪ್ರಮುಖ ಸುದ್ದಿವಿದೇಶ

ಪತ್ನಿ ಜತೆ ಶಾಂಪಿಂಗ್ ಮಾಡಿ ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಕೊಹ್ಲಿ.!

ಕೇಪ್ ಟೌನ್,.1-ದೂರದ ಇಟಲಿಯಲ್ಲಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಹೊಸ ವರ್ಷವನ್ನು ದಕ್ಷಿಣ ಆಫ್ರಿಕಾದಲ್ಲಿ ಆಚರಿಸಿದ್ದಾರೆ.

ಭಾನುವಾರ ಅಭ್ಯಾಸವಾದ ಬಳಿಕ ಕೊಹ್ಲಿ ಅನುಷ್ಕಾ ಜತೆ ಮಾಲ್ ವೊಂದರಲ್ಲಿ ಶಾಪಿಂಗ್ ಮಾಡಿದ್ದಾರೆ. ಕೊಹ್ಲಿಯನ್ನು ಗುರುತು ಹಿಡಿದ ಕೆಲ ಅಭಿಮಾನಿಗಳು ಅವರ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ.

ಈ ಮಧ್ಯೆ ಕೊಹ್ಲಿ ಹಾಗೂ ಶಿಖರ್ ಧವನ್ ಕೇಪ್ ಟೌನ್ ನ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ. ಅಲ್ಲಿನ ಸ್ಥಳೀಯ ಕಲಾವಿದರ ಸಂಗೀತಕ್ಕೆ ಕೊಹ್ಲಿ ಹಾಗೂ ಶಿಖರ್ ಧವನ್ ರಸ್ತೆಯೆಂಬುದನ್ನು ಲೆಕ್ಕಿಸದೆ ಪಂಜಾಬಿ ಶೈಲಿಯಲ್ಲಿ ನೃತ್ಯ ಮಾಡಿ ಸಂತಸಪಟ್ಟಿದ್ದಾರೆ. ಈ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲಾಣದಲ್ಲಿ ವೈರಲ್ ಆಗಿದೆ. (ವರದಿ-ಎಂ.ಎನ್)

Leave a Reply

comments

Related Articles

error: