ದೇಶಮೈಸೂರು

ಜೆಎಸ್‍ಎಸ್‍ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಉದ್ಘಾಟನೆ

ಜೆಎಸ್‍ಎಸ್‍ ಮೆಡಿಕಲ್‍ ಸರ್ವೀಸ್‍ ಟ್ರಸ್ಟ್  ವತಿಯಿಂದ ಜೆಎಸ್‍ಎಸ್‍ ಜನೌಷಧ ಕೇಂದ್ರಕ್ಕೆ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಗುರುವಾರ ಚಾಲನೆ ನೀಡಲಾಯಿತು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‍.ಸಿ. ಮಹದೇವಪ್ಪ ಅವರು ಜನೌಷಧ ಕೇಂದ್ರವನ್ನು ಉದ್ಘಾಟಿಸಿದರು. ಶಾಸಕರಾದ ಎಂ.ಕೆ. ಸೋಮಶೇಖರ್‍, ವಾಸು, ಜಿ.ಟಿ. ದೇವೇಗೌಡ, ಆಸ್ಪತ್ರೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ, ಭಾರತೀಯ ಔಷಧೀಯ ಮಂಡಳಿ ಅಧ್ಯಕ್ಷರು ಮತ್ತು ಜೆಎಸ್‍ಎಸ್‍ ವಿವಿ ಕುಲಪತಿಗಳಾದ ಡಾ.ಬಿ.ಸುರೇಶ್ ಅವರು ಉಪಸ್ಥಿತರಿದ್ದರು. ಕೇಂದ್ರ ಸರ್ಕಾರದ ಯೋಜನೆ ಅನ್ವಯ ದೇಶಾದ್ಯಂತ ಆರಂಭವಾಗಿರುವ ಜನೌಷಧ ಕೇಂದ್ರಗಳಲ್ಲಿ ಔಷಧಿಗಳು ಶೇ. 50 ರಿಂದ 60 ರಷ್ಟು ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ ಎನ್ನಲಾಗಿದೆ.

web-new-2

Leave a Reply

comments

Related Articles

error: