ಸುದ್ದಿ ಸಂಕ್ಷಿಪ್ತ

ಜ.3ರಂದು ‘ಇ-ಕಾಮರ್ಸ್’ ಕಾರ್ಯಾಗಾರ

ಮೈಸೂರು, ಜ.1 : ಎಂಎಂಕೆ ಮತ್ತು ಎಸ್ಡಿಎಂ ಮಹಿಳಾ ಮಹಾ ವಿದ್ಯಾಲಯದ ವಾಣಿಜ್ಯ ವಿಭಾಗ, ಮೈಸೂರು ವಿವಿಯ ವಾಣಿಜ್ಯ ಮತ್ತು ಮ್ಯಾನೇಜ್ ಮೆಂಟ್ ಟೀಚರ್ ಫೋರಮ್ಸ್ ಸಂಯುಕ್ತವಾಗಿ ‘ಇ-ಕಾಮರ್ಸ್’ ಕಾರ್ಯಾಗಾರವನ್ನು ಜ.3ರಂದು ಬೆಳಗ್ಗೆ 10 ಗಂಟೆಯಿಂದ ಆಯೋಜಿಸಿದೆ.

ಮುಖ್ಯ ಅತಿಥಿಯಾಗಿ ಮೈಸೂರು ವಿವಿಯ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಬಿ.ನಾಗರಾಜ್ ಭಾಗಿಯಾಗುವರು, ಟೀಚರ್ಸ್ ಫೋರಂನ ಅಧ್ಯಕ್ಷ ಡಾ.ಜಿ.ಹೆಚ್.ಮಹದೇವ ಸ್ವಾಮಿ, ಕಾರ್ಯದರ್ಶಿ ಡಾ.ಬಿ.ಎಸ್.ಯೋಗೀಶ್, ಎಂಎಂಕೆ ಮತ್ತು ಎಸ್ಡಿಎಂ ಕಾಲೇಜು ಪ್ರಾಂಶುಪಾಲರಾದ ಪ್ರೊ.ಸಾಯಿನಾಥ ಮಲ್ಲಿಗಿಮಾಡು ಅಧ್ಯಕ್ಷತೆ ವಹಿಸುವರು.

ಡಾ.ಎ.ಸಿ.ಪ್ರಮೀಳಾ, ಡಾ.ಬಿ.ರವಿಶಂಕರ್, ಅರುಣಾದೇವಿ, ಪ್ರೊ.ರಾಂಪುರ ಸಾಯಿನಾಥ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. (ಕೆ.ಎಂ.ಆರ್ಪಿ)

Leave a Reply

comments

Related Articles

error: