ಪ್ರಮುಖ ಸುದ್ದಿಮೈಸೂರು

ವಾಹನ ಸವಾರರೇ ನಿಮಗಿಷ್ಟ ಬಂದ ಹೆಲ್ಮೆಟ್ ಧರಿಸುವ ಮುನ್ನ ಎಚ್ಚರಿಕೆ ಪೊಲೀಸರು ಕಾಣಸಿಗಬಹುದು..!

ಮೈಸೂರು,ಜ.2:- ದ್ವಿಚಕ್ರವಾಹನದಲ್ಲಿ ಹೋಗುವವರಿಗೆ ಹೆಲ್ಮೆಟ್ ದೇ ಸಮಸ್ಯೆ. ಸಿಗ್ನಲ್ ಗಳಲ್ಲಿಯಂತೂ ತಪ್ಪಿಸಿಕೊಂಡು ಓಡಾಡೋರೇ ಹೆಚ್ಚು. ಮೈಸೂರಿನಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು ಕೆಲವು ದ್ವಿಚಕ್ರವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಅದೇನೆಂದರೆ ಐಎಎಸ್ ಮಾರ್ಕ್ ಇರೋ ಹೆಲ್ಮೆಟ್ ನ್ನು ನೀವು ಕಡ್ಡಾಯವಾಗಿ ಬಳಸಬೇಕು. ತಪ್ಪಿದಲ್ಲಿ ಇನ್ನು ಮುಂದೆ ದಂಡ..!?

ಹೆಲ್ಮೆಟ್ “ಶಿರ ರಕ್ಷಕ ಕವಚ” ಕಡ್ಡಾಯ ಮತ್ತು ಐಎಸ್ ಐ ಮಾರ್ಕ್ ಇರುವ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಕುರಿತು ‘ಸಿಟಿಟುಡೇ’ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ವಿಕ್ರಂ ಆಮಟೆ ಅವರನ್ನು ಮಾತನಾಡಿಸಿತು. ಅವರೊಂದಿಗಿನ ಚಿಟ್ ಚಾಟ್ ಇಲ್ಲಿದೆ.

ಹೆಲ್ಮೆಟ್ ಹಾಕಲೇಬೇಕೆಂಬ ಒತ್ತಾಯವೇಕೆ..?

ನಮಗೋಸ್ಕರ ಅಲ್ಲ, ಪೊಲೀಸರಿಗಾಗಿ ಮಾಡಬೇಡಿ, ನಿಮ್ಮ ರಕ್ಷಣೆ ನೀವು ಮಾಡಿಕೊಳ್ಳಿ ಎನ್ನುವುದಕ್ಕೋಸ್ಕರ ಹೆಲ್ಮೆಟ್ ಕಡ್ಡಾಯ ಮಾಡಿದ್ದೇವೆ.

ಅದು ಸರಿ ಆದರೆ ಐಎಸ್ ಐ ಮಾರ್ಕ್ ಇರೋದೆ ಹಾಕಬೇಕೆನ್ನುವ ನಿಯಮವೇಕೆ..?

ನಾವು ಯಾವುದನ್ನೂ ಪೊಲೀಸರಿಗೋಸ್ಕರ ಹೇಳುತ್ತಿಲ್ಲ. ನಾವು ಹೆಲ್ಮೆಟ್ ಕಡ್ಡಾಯಗೊಳಿಸಿದ ತಕ್ಷಣ ಕೆಲವರು ಹೆಲ್ಮೆಟ್ ಖರೀದಿಸಿ ಧರಿಸಿ ವಾಹನ ಚಾಲನೆ ಮಾಡುತ್ತಿದ್ದರು. ಆದರೆ ಆ ಹೆಲ್ಮೆಟ್ ಗಳು ಸುರಕ್ಷಿತವಲ್ಲ. ರಾಸಾಯನಿಕಯುಕ್ತ ಮತ್ತು ಎಲ್ಲಿಯಾದರೂ ಬಿದ್ದರೆ ಅದು ತಲೆಗೆ ಹಾನಿಯುಂಟು ಮಾಡಬಹುದು ಎನ್ನುವ ದೃಷ್ಟಿಯಿಂದ ಜನರ ಹಿತಕ್ಕಾಗಿಯೇ ಹೇಳುತ್ತಿದ್ದೇವೆಯೇ ವಿನ: ಅದರ ಹಿಂದೆ ನಮ್ಮ ದುರುದ್ದೇಶವೇನೂ ಇಲ್ಲ.

ವಾಹನ ಚಾಲಕರು ಫುಲ್ ಹೆಲ್ಮೇಟ್ ಹಾಕಿ ಬರುತ್ತಾರೆ..ಅವರು ಏನೋ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ನೀವು ಹೇಗೆ ಗುರುತಿಸುತ್ತಿರಾ..? ತಪ್ಪಿಸಿಕೊಳ್ಳಬಹುದಲ್ಲವೇ..?

ಅದಕ್ಕೆ ಕಾನೂನಿದೆ. ಹಾಗೆಲ್ಲ ಮಾಡಲು ಸಾಧ್ಯವಿಲ್ಲ. ಪೊಲೀಸರು ಇರೋದೆ ದುಷ್ಕೃತ್ಯಗಳಲ್ಲಿ ತೊಡಗಿರುವವರಿಗೆ ಶಿಕ್ಷೆ ನೀಡೋದಕ್ಕೆ. ನಾವು ಫುಲ್ ಇರೋದನ್ನೇ ಧರಿಸಿ ಎಂದು ಹೇಳುತ್ತಿಲ್ಲ. ಅದು ಹಾಪ್ ಇದ್ದರೂ ಐಎಸ್ ಐ ಮಾರ್ಕ್ ಇರುವ ಹೆಲ್ಮೆಟ್ ಗಳನ್ನೇ ಧರಿಸಿ. ಅಂದರೆ ಅದು ದೃಢಿಕೃತವಾಗಿರಬೇಕು.

ಐಎಸ್ ಐ ಮಾರ್ಕಿಲ್ಲದ ಹೆಲ್ಮೆಟ್ ಧರಿಸಿದವರಿಗೆ ದಂಡ ವಿಧಿಸಲಾಗುವುದೇ..? ನಿಯಮ ಜಾರಿ..?

ಜನರಲ್ಲಿ ಈ ಕುರಿತು ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದೆ. ಈ ಹಿಂದೆಯೇ ನಾವು ಐಎಸ್ ಐ ಮಾರ್ಕಿನ ಹೆಲ್ಮೆಟ್ ಧರಿಸಿ ನಿಮಗೆ ಒಳ್ಳೆಯದು ಎಂದು ಹೇಳಿದ್ದೆವು. ಆದರೆ ಸಿಕ್ಕ ಸಿಕ್ಕ ಹೆಲ್ಮೆಟ್ ಖರೀದಿಸಿ ಓಡಾಡುತ್ತಿದ್ದರು. ಆದರೆ ಈಗ ಐಎಸ್ ಐ ಮಾರ್ಕಿನದೇ ಧರಿಸಿ ಎಂದು ತಿಳಿಸಲಾಗುತ್ತಿದೆ. ನಮ್ಮ ಸಂಚಾರ ಪೊಲೀಸರು ಐಎಸ್ ಐ ಮಾರ್ಕಿಲ್ಲದ ಹೆಲ್ಮೆಟ್ ಧರಿಸಿದ ವಾಹನ ಸವಾರರನ್ನು ತಡೆದು ನಿಲ್ಲಿಸಿ ಅವರ ಹೆಲ್ಮೆಟ್ ಪಡೆದು ಅದರಲ್ಲಿ ವಾಹನದ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳನ್ನು ನಮೂದಿಸಿಕೊಳ್ಳುತ್ತಿದ್ದಾರೆ. ಸ್ವಲ್ಪದಿನ ಈ ಕುರಿತು ಜಾಗೃತಿ ಮೂಡಿಸಲಾಗುವುದು. ನಂತರ ದಂಡ ವಿಧಿಸಲು ಆರಂಭಿಸುತ್ತೇವೆ. ಪೊಲೀಸರು ಕೂಡ ಈ ಕುರಿತು ವಾಹನಸವಾರರಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ.

ಹೆಲ್ಮೆಟ್ ಕಡ್ಡಾಯ ಮಾಡಿರುವುದರಿಂದ ಈಗಾಗಲೇ ಸಾಕಷ್ಟು ಜನ ಬೇಸರಗೊಂಡಿದ್ದರು. ಇನ್ನು ಐಎಸ್ ಐ ಮಾರ್ಕ್ ಇರುವುದನ್ನೇ ಧರಿಸಿ ಎಂದರೆ ..? ಅದೇನೇ ಇರಲಿ ಪೊಲೀಸ್ ಇಲಾಖೆ ಮಾತ್ರ ಮೈಸೂರಲ್ಲಿ ಅದು ನಗರ ವ್ಯಾಪ್ತಿಯಲ್ಲಿ ತುಂಬಾ ಖಡಕ್ ಆಗಿಯೇ ಇದೆ. ವಾಹನ ಸವಾರರೇ ನಿಮಗಿಷ್ಟ ಬಂದ ಹೆಲ್ಮೆಟ್ ಧರಿಸುವ ಮುನ್ನ ಎಚ್ಚರಿಕೆ ಪೊಲೀಸರು ಕಾಣಸಿಗಬಹುದು..! (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: