ಕರ್ನಾಟಕ

ಬ್ಯಾರಿಕೇಡ್‍ಗೆ ಬೈಕ್ ಡಿಕ್ಕಿ: ಇಬ್ಬರ ಸಾವು

ಮಂಡ್ಯ,ಜ.02: ಬ್ಯಾರಿಕೇಡ್‍ಗೆ ಬೈಕ್ ಡಿಕ್ಕಿ ಹೊಡೆದು ಪರಿಣಾಮ ಸ್ನೇಹಿತರಿಬ್ಬರು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೌಡೇನಹಳ್ಳಿ ಸಮೀಪ ನಡೆದಿದೆ.

ಯುವಕರು ನಾಗಮಂಗಲ ಪಟ್ಟಣದ ನಿವಾಸಿಗಳಾದ ಪವನ್(23) ಮತ್ತು ಪ್ರದೀಪ್(23) ಮೃತ ದುರ್ದೈವಿಗಳು. ಹುಲಿಯೂರು ದುರ್ಗದಲ್ಲಿ ಅಕ್ಕನ ಮನೆಯಲ್ಲಿದ್ದ ಪವನ್‍ನನ್ನು ಗೆಳೆಯ ಪ್ರದೀಪ್ ಹೊಸ ವರ್ಷದ ಆಚರಣೆಗಾಗಿ ಊರಿಗೆ ಕರೆಸಿಕೊಂಡಿದ್ದ. ಗೆಳೆಯರಿಬ್ಬರು ಹೊಸವರ್ಷದ ಪಾರ್ಟಿ ಮುಗಿಸಿಕೊಂಡು ತಡರಾತ್ರಿ ಬೆಳ್ಳೂರು ಕ್ರಾಸ್ ಕಡೆಯಿಂದ ನಾಗಮಂಗಲಕ್ಕೆ ಆಗಮಿಸುತ್ತಿದ್ದಾಗ ಚೌಡೇನಹಳ್ಳಿ ಸಮೀಪ ಚೆಕ್‍ಪೋಸ್ಟ್ ಬಳಿ ಹಾಕಿದ್ದ ಬ್ಯಾರಿಕೇಡ್‍ಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗೆಳೆಯರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಘಟನೆ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  (ವರದಿ: ಪಿ.ಎಸ್)

Leave a Reply

comments

Related Articles

error: