ಮೈಸೂರು

ಸವಿತಾ ಸಮಾಜದ ಜಿಲ್ಲಾಧ‍್ಯಕ್ಷರಾಗಿ ನಾಗೇಶ್ ಆಯ್ಕೆ

ಮೈಸೂರು, ಜ.2 : ಕರ್ನಾಟಕ ರಾಜ್ಯ ಸವಿತಾ ಸಮಾಜ ಸಂಘದ ಮೈಸೂರು ಜಿಲ್ಲಾ ನೂತನ ಅಧ್ಯಕ್ಷರನ್ನಾಗಿ ಎನ್.ಆರ್.ನಾಗೇಶ್   ನೇಮಕಗೊಳಿಸಲಾಗಿದ್ದು ಇವರೊಂದಿಗೆ ಜಿಲ್ಲೆಯ ವಿವಿಧ ತಾಲ್ಲೂಕಾಧ್ಯರುಗಳ ಆಯ್ಕೆಯನ್ನು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಘೋಷಿಸಲಾಯಿತು.

ಹುಣಸೂರಿನ ಅಧ್ಯಕ್ಷರಾಗಿ ಗೌರೀಶ್, ತಾಲ್ಲೂಕು ಪ್ರತಿನಿಧಿಯಾಗಿ ಮಂಜುನಾಥ್, ಟಿ.ನರಸೀಪುರದ ಅಧ್ಯಕ್ಷರಾಗಿ ನಾಗೇಂದ್ರ, ತಾಲ್ಲೂಕು ಪ್ರತಿನಿಧಿಯಾಗಿ ಮುರುಳೀಧರ್,  ಹೆಚ್.ಡಿ.ಕೋಟೆ ಅಧ್ಯಕ್ಷರಾಗಿ ನರಸಿಂಗ, ತಾಲ್ಲೂಕು ಪ್ರತಿನಿಧಿಯಾಗಿ ರೇವಣ್ಣ, ನಂಜನಗೂಡಿನ ಅಧ್ಯಕ್ಷರಾಗಿ ಸಿ.ಕೃಷ್ಣರಾಜ್, ತಾಲ್ಲೂಕು ಪ್ರತಿನಿಧಿಯಾಗಿ ಸೌಭಾಗ್ಯ,  ಕೆ.ಆರ್.ನಗರದ ಅಧ್ಯಕ್ಷರಾಗಿ ಸಂಪತ್ತು, ತಾಲ್ಲೂಕು ಪ್ರತಿನಿಧಿಯಾಗಿ ವೆಂಕಟೇಶ್, ಪಿರಿಯಾಪಟ್ಟಣದ ಅಧ್ಯಕ್ಷರಾಗಿ ಅಶೋಕ್, ತಾಲ್ಲೂಕು ಪ್ರತಿನಿಧಿಯಾಗಿ ರಂಗಸ್ವಾಮಿ ಆಯ್ಕೆಯಾಗಿದ್ದಾರೆ.

ಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್ಪಿ)

Leave a Reply

comments

Related Articles

error: