ದೇಶ

22 ಸಾವಿರ ಎಟಿಎಂ ಕೇಂದ್ರಗಳು ಹೊಸ ನೋಟಿನ ವಹಿವಾಟಿಗೆ ಸಿದ್ಧ

500 ಹಾಗೂ 2000 ಸಾವಿರ ಹೊಸ ನೋಟುಗಳ ವಹಿವಾಟಿಗೆ ಇಪ್ಪತ್ತೆರಡು ಸಾವಿರ ಐದುನೂರು ಎಟಿಎಂ ಕೇಂದ್ರಗಳು ಸಜ್ಜಾಗಿದ್ದು ಇಂದಿನಿಂದ (ನ.18)ರಿಂದ ಕಾರ್ಯಾರಂಭಗೊಳ್ಳುತ್ತಿವೆ.

ದೇಶದಲ್ಲಿ ಸುಮಾರು ಎರಡು ಲಕ್ಷ ಎಟಿಎಂ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಶೇ.10ರಷ್ಟು ಕೇಂದ್ರಗಳಲ್ಲಿ ಮಾತ್ರ ಹೊಸ ನೋಟುಗಳು ಲಭ್ಯವಾಗಲಿದೆ. ಹೊಸ ನೋಟುಗಳ ವಿನ್ಯಾಸಕ್ಕೆ ತಕ್ಕಂತೆ ಯಂತ್ರಗಳನ್ನು ಬದಲಾಯಿಸಬೇಕಾಗಿದೆ. ಆದ್ದರಿಂದ ಎಲ್ಲಾ ವ್ಯವಸ್ಥಿತವಾಗಿ ಮೊದಲಿನಂತಾಗಲೂ ಇನ್ನೂ ಮೂರು ವಾರಗಳು ಬೇಕಾಗುವುದು ಎನ್ನುವ ಊಹೆಯಿದೆ. ಕೇಂದ್ರ ಸರ್ಕಾರ ಹಳೆ ನೋಟುಗಳನ್ನು ಅಮಾನ್ಯಗೊಳಿಸಿದ್ದರಿಂದ ಸತತ 9 ದಿನಗಳಿಂದಲೂ ಸಾರ್ವಜನಿಕರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ನೋಟುಗಳನ್ನು ಹಿಂಪಡೆಯುಲು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಇದನ್ನು ತಡೆಯಲು ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳತ್ತಲೇ ಇದೆ.

ಸಾವಿರ ಮುಖಬೆಲೆಯ ನೋಟನ್ನು ಹೊರತರಲು ಸದ್ಯಕ್ಕೆ ಅಸಾಧ್ಯ. ಹೊಸ ಐದುನೂರು ಹಾಗೂ ಎರಡು ಸಾವಿರ ಮೌಲ್ಯದ ನೋಟುಗಳ ವಿನ್ಯಾಸಕ್ಕೆ ತಕ್ಕಂತೆ ಎಟಿಎಂ.ಗಳ ತಂತ್ರಜ್ಞಾನವನ್ನು ಬದಲಿಸುವುದಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಚೇಟ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: