Uncategorizedಮೈಸೂರು

ವಯೋಲಿನ್ ವಾದಕ ವಿದ್ವಾಂಸ ಎಸ್.ಮಹದೇವಪ್ಪ ನಿಧನ : ಸುತ್ತೂರು ಶ‍್ರೀಗಳಿಂದ ಸಂತಾಪ

ಮೈಸೂರು, ಜ.2 : ನಾಡಿನ ಖ್ಯಾತ ವಯೋಲಿನ್ ವಾದಕ, ವಿದ್ವಾಂಸ ಎಸ್.ಮಹದೇವಪ್ಪನವರ ನಿಧನಕ್ಕೆ ಸುತ್ತೂರು ಜಗದ್ಗುರು ಶ್ರೀಶಿವರಾತ್ರಿ ದೇಶೀಕೇಂದ್ರ ಶ್ರೀಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

ರೈತ ಕುಟುಂಬದ ಹಿನ್ನಲೆಯಿಂದ ಬಂದ ಮಹದೇವಪ್ಪನವರ ಅಸಾಧಾರಣ ವಿದ್ವತ್ ನಿಂದ ಆರೇಳು ದಶಕಗಳ ಕಾಲ ಸಂಗೀತ ವಲಯದಲ್ಲಿ ಅಪಾರ ಪ್ರೀತಿ, ಗೌರವ, ಮನ್ನಣೆಗಳಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದರು. ಅದರೊಂದಿಗೆ,  ಜೆಎಸ್ಎಸ್ ಸಂಗೀತ ಸಭೆಯ ಆರಂಭದ ದಿನಗಳಿಂದಲೂ ಕಟ್ಟಿ ಬೆಳೆಸಿದ ಮಹಾನ್ ಸಂಘಟಕರು, ಸಭೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.  ಶ್ರೀಮಠದಿಂದ ‘ಸಂಗೀತ ವಿದ್ಯಾನಿಧಿ’ ಬಿರುದು ನೀಡಿ ಸನ್ಮಾನಿಸಲಾಗಿದೆ.

ವಿದ್ವಾನ್ ಮಹದೇವಪ್ಪನವರ ಅಗಲುವಿಕೆಯಿಂದ ಮೈಸೂರಿನ ಸಂಗೀತ ಕ್ಷೇತ್ರದ ಹಿರಿಯ ಸ್ಥಾನವೊಂದು ಬರಿದಾಗಿದೆ, ಇದರೊಂದಿಗೆ ಸಾಂಸ್ಕೃತಿಕ ಕ್ಷೇತ್ರ ಬಡವಾಗಿದೆ, ಇವರ ಆತ್ಮಕ್ಕೆ ಶಾಂತಿ ಸಿಗಲಿ, ಇವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ಕುಟುಂಬಕ್ಕೆ ದಯಪಾಲಿಸಲಿ ಎಂದು ಶ್ರೀಗಳು ಪ್ರಕಟಣೆಯಲ್ಲಿ ಹಾರೈಸಿದ್ದಾರೆ. (ಕೆ.ಎಂ.ಆರ್ಪಿ)

Leave a Reply

comments

Related Articles

error: