
ಪ್ರಮುಖ ಸುದ್ದಿಮೈಸೂರು
ಎರಡು ಸಾವಿರ ರು. ಹೊಸ ನೋಟಿನಲ್ಲಿ ಮೋದಿ ಭಾಷಣ..?
ಇದು ಅಚ್ಚರಿ ಆದರೂ ನೀವೂ ನಂಬಲೇಬೇಕು. ಇತ್ತೀಚಿಗಷ್ಟೇ ಕಪ್ಪು ಹಣದ ಮೇಲೆ ಸರ್ಜಿಕಲ್ ದಾಳಿ ನಡೆಸಿರುವ ಪ್ರಧಾನಿ ಮೋದಿ ಅವರ ನೂತನ ಯೋಜನೆಯ ನೋಟಿನಲ್ಲಿ ಇದೀಗ ಮತ್ತಷ್ಟು ಕುತೂಹಲ ಇದೆ ಎಂದು ಕಂಡು ಬಂದಿದೆ. ಯಾಕಂದ್ರೆ, ಎರಡು ಸಾವಿರದ ಹೊಸ ನೋಟಿನಲ್ಲಿ ಮೋದಿ ಅವರು ಭಾಷಣ ಮಾಡುವ ವಿಡಿಯೋ ಇದೆ. ಅರೆ ಹೌದಾ ಅಂತ ಶಾಕ್ ಆಗ್ಬೇಡಿ ಇದು ಸತ್ಯ. ಎರಡು ಸಾವಿರ ಮುಖಬೆಲೆಯ ಹಿಂಬದಿ ಭಾಗದಲ್ಲಿನ ಮಂಗಳ ಗ್ರಹದ ಚಿಹ್ನೆಯ ಮೇಲೆ ಆ್ಯಪ್ ಮೂಲಕ ಸ್ಕ್ಯಾನ್ ಮಾಡಿದರೆ ಸಾಕು ಮೋದಿ ಅವರು ಭಾಷಣ ಮಾಡುತ್ತಿರುವ ವಿಡಿಯೋ ನಿಮ್ಮ ಮುಂದೆ ಬರತ್ತೆ.
ವಿಡಿಯೋ ನೋಡಲು ಬೇಕು ಆ್ಯಪ್:
ಹೌದು, ಈ ನೋಟಿನ ಮೇಲೆ ನೀವೂ ಸ್ಕ್ಯಾನ್ ಮಾಡಬೇಕಾದರೆ ಬೇಕಾಗಿರೋದು ಮೊಬೈಲ್ ಆ್ಯಪ್. ನಿಮ್ಮ ಮೊಬೈಲ್ ನ ಗೂಗಲ್ ಪ್ಲೇ ಸ್ಟೋರ್ ನಲ್ಲಿ ‘ಮೋದಿ ಕೀ ನೋಟ್’ ಎಂದು ಇಂಗ್ಲಿಷ್ ನಲ್ಲಿ ಟೈಪ್ ಮಾಡಿದರೆ ನಿಮಗೆ ಆ್ಯಪ್ ಸಿಗುತ್ತದೆ. ಆ್ಯಪ್ ಡೌನ್ ಲೋಡ್ ಮಾಡಿಕೊಂಡು, ಎರಡು ಸಾವಿರ ಮುಖ ಬೆಲೆಯ ನೋಟಿನ ಹಿಂಭಾಗದಲ್ಲಿ ಹಿಡಿದರೆ ಮೋದಿ ಅವರು ಭಾಷಣ ಮಾಡುತ್ತಿರುವ ವಿಡಿಯೋ ನಿಮಗೆ ಕಾಣುತ್ತದೆ.
ಸಖತ್ ವೈರಲ್ ಆಗಿದೆ ಆ್ಯಪ್ ಮತ್ತು ವಿಡಿಯೋ:
ಇನ್ನು, ಈ ವಿಡಿಯೋ ಹಾಗೂ ಆ್ಯಪ್ ಈಗಾಗಲೇ ಸಖತ್ ವೈರಲ್ ಆಗಿದೆ. ಯಾರ ಮೊಬೈಲ್ ನೋಡಿದರೂ ಮೋದಿ ಕೀ ನೋಟ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ವಿಡಿಯೋ ನೋಡುತ್ತಿದ್ದಾರೆ. ಆದರೆ, ತಜ್ಞರ ಪ್ರಕಾರ ಇದು ಮೊಬೈಲ್ ಆ್ಯಪ್ ಮೂಲಕ ಅಳವಡಿಸಿರುವ ತಂತ್ರಜ್ಞಾನ. ಹಾಗಾಗಿ ನೋಟಿನಲ್ಲಿ ಈ ರೀತಿಯ ಸಿಸ್ಟಮ್ ಅಳವಡಿಸಲು ಸಾಧ್ಯವಿಲ್ಲ. ನೋಟಿನಲ್ಲಿ ಹೀಗೆ ಮಾಡಿದರೂ ಅದು ಕಾನೂನಿನ ಪ್ರಕಾರ ತಪ್ಪಾಗುತ್ತದೆ. ಆ್ಯಪ್ ಕಂಪನಿಯ ಮೇಲೆ ಇದೀಗ ಪ್ರಕರಣಗಳು ದಾಖಲಾಗಿ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯೂ ಇದೆ ಎನ್ನುತ್ತಿದ್ದಾರೆ. ಒಟ್ಟಾರೆ, ನಮ್ಮ ಜನತೆ ಹೊಸ ಯೋಜನೆಗೆ ಕುತೂಹಲಕಾರಿ ವಿಷಯಗಳಿಗೆ ಹೆಚ್ಚಾಗಿ ಆಕರ್ಷಿತರಾಗ್ತಾರೆ ಅನ್ನೋದಕ್ಕೆ “ಮೋದಿ ಕೀ ನೋಟ್” ಆ್ಯಪ್ ಸಣ್ಣ ಉದಾಹರಣೆ.