ಮೈಸೂರು

ಸಾಲದ ರೂಪದಲ್ಲಿ ಪ್ರಸಕ್ತ ತಿಂಗಳ ಪಡಿತರ

ಹಳೆ ನೋಟು ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಸಾಮಾನ್ಯ ಜನರ ದೈನಂದಿನ ಜನಜೀವನ ದುಸ್ತರವಾಗಿದೆ. ಇದರಿಂದ ರಾಜ್ಯದ ಪ್ರಸಕ್ತ ತಿಂಗಳಿನ ಬಿಪಿಎಲ್ ಕಾರ್ಡ್ ದಾರರಿಗೆ ನ್ಯಾಯಬೆಲೆ ಅಂಗಡಿಗಳಿಂದ ಪಡಿತರವನ್ನು ಸಾಲದ ರೂಪದಲ್ಲಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಘೋಷಿಸಿದ್ದಾರೆ.

hqdefaultರಾಜ್ಯದಲ್ಲಿ ಇಪ್ಪತ್ತು ಸಾವಿರ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು ಒಂದು ಕೋಟಿಗೂ ಹೆಚ್ಚು ಬಿಪಿಎಲ್ ಕುಟುಂಬಗಳಿವೆ. ಬಡವರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಸರ್ಕಾರ ಪಡಿತರವನ್ನು ಸಾಲದ ರೂಪದಲ್ಲಿ ನೀಡಲು ನಿರ್ಧರಿಸಿದೆ. ನವೆಂಬರ್ ಮಾಸಾಂತ್ಯದವರೆಗೆ ಸಾಲದ ರೂಪದಲ್ಲಿ ನ್ಯಾಯಬೆಲೆ ಅಂಗಡಿಯಿಂದ ಸಕ್ಕರೆ, ಎಣ್ಣೆ, ಉಪ್ಪು ಹಾಗೂ ಗೋಧಿಯನ್ನು ನೀಡಲಾಗುವುದು. ಇದರಿಂದ ರಾಜ್ಯ ಸರ್ಕಾರಕ್ಕೆ 80 ಕೋಟಿ ರೂಪಾಯಿ ಹೊರೆಯಾಗಲಿದೆ. ಪಡಿತರ ವಿತರಿಸಿದ ದಾಖಲೆಗಳನ್ನು ಸರ್ಕಾರಕ್ಕೆ ನೀಡಿದ ನಂತರ ಅವರಿಗೆ ಮೊತ್ತವನ್ನು ಮರುಪಾವತಿ ಮಾಡಲಾಗುವುದು ಎಂದರು.

ಆದಾಯ ತೆರಿಗೆ ಪಾವತಿಸುವವರು, ಸ್ವಂತ ಕಾರು, ನಗರದಲ್ಲಿ ಹೊಂದಿರುವವರಿಗೆ ಬಿಪಿಎಲ್ ಕಾರ್ಡು ನೀಡುವಂತಿಲ್ಲ.  ಬ್ಯಾಂಕ್ ಖಾತೆಗಳಿಗೆ 2.50 ಲಕ್ಷಕ್ಕೂ ಅಧಿಕ ಮೊತ್ತವನ್ನೇನಾದರು ಬ್ಯಾಂಕ್‍ ಖಾತೆಗಳಿಗೆ ಜಮಾವಣೆ ಮಾಡಿದರೆ ಅವರು ತೆರಿಗೆದಾರರಾಗಲಿದ್ದು ಅವರ ಹೆಸರಿಗಿರುವ ಬಿಪಿಎಲ್ ಕಾರ್ಡ್ ತಾನಾಗಿಯೇ ರದ್ದಾಗಲಿದೆ. ತೆರಿಗೆ ಪಾವತಿಸುವವರು ಬಿಪಿಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.

Leave a Reply

comments

Related Articles

error: