ಕ್ರೀಡೆಪ್ರಮುಖ ಸುದ್ದಿ

ಸೌಟ್ ಹಿಡಿದ ಕ್ರಿಕೆಟ್ ದಂತಕತೆ ಸಚಿನ್.!

ಮುಂಬೈ,ಜ.3-ಕ್ರಿಕೆಟ್ ಲೋಕದ ದಂತಕತೆ ಸಚಿನ್ ತೆಂಡೂಲ್ಕರ್ ಕೈಯಲ್ಲಿ ಸೌಟ್ ಹಿಡಿದು ಅಡುಗೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಚಿನ್ ತಮ್ಮ ಕುಟುಂಬ ಹಾಗೂ ಸ್ನೇಹಿತರಿಗಾಗಿ ಅಡುಗೆ ಸಿದ್ಧಪಡಿಸುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹೊಸ ವರ್ಷದ ಸಂಜೆ ವೇಳೆ ನನ್ನ ಸ್ನೇಹಿತರಿಗಾಗಿ ಅಡುಗೆ ಸಿದ್ಧ ಪಡಿಸುತ್ತಿರುವುದು ಸಂತಸವನ್ನುಂಟು ಮಾಡಿದೆ. ನೀವು ಸಹ ಇದೇ ರೀತಿ ಆಪ್ತರೊಂದಿಗೆ ಹೊಸ ವರ್ಷದ ಕ್ಷಣಗಳನ್ನು ಸಂತಸ ವಾಗಿ ಕಳೆದಿದ್ದೀರಾ ಎಂದು ಭಾವಿಸಿದ್ದೇನೆ. ಹೊಸ ವರ್ಷದ ಶುಭಾಶಯಗಳು ಎಂದು ಬರೆದಿದ್ದಾರೆ. ಸಚಿನ್ ಪೋಸ್ಟ್ ಮಾಡಿರುವ ಈ ವಿಡಿಯೋಗೆ 29,490 ಲೈಕ್ಸ್, 2188 ರೀ ಟ್ವಿಟ್ಸ್ ಬಂದಿದೆ. (ವರದಿ-ಎಂ.ಎನ್)

Leave a Reply

comments

Related Articles

error: